ರಾಜ್ಯ

ಧಾರವಾಡದಲ್ಲಿ ಮೇ 3 ರಿಂದ ಜಂಗಮ ವಟುಗಳಿಗೆ ಸಂಸ್ಕಾರ ಶಿಬಿರ

ಮೇ 8 ರಂದು ಸಾಮೂಹಿಕ ಅಯ್ಯಾಚಾರ, ರಂಭಾಪುರಿ ಶ್ರೀಗಳ ಧರ್ಮಸಭೆ

ಧಾರವಾಡ prajakiran.com ಏ. 27 : ಧಾರವಾಡದ ಶ್ರೀಮತಿ ಡಾ. ಮಾಲತಿ ಹಿರೇಮಠ ಟ್ರಸ್ಟ್ ವತಿಯಿಂದ ಅಖಿಲ ಭಾರತ ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಸಹಕಾರದಲ್ಲಿ ಜಂಗಮ ವಟುಗಳಿಗೆ ಉಚಿತವಾಗಿ 5 ದಿನಗಳ ಸಂಸ್ಕಾರ ಶಿಬಿರ ಆಯೋಜಿಸಲಾಗಿದೆ.

ಮೇ 8 ರಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರುಗಳ ಸಾನಿಧ್ಯದಲ್ಲಿ ಸಂಸ್ಕಾರ ಶಿಬಿರದ ಸಮಾರೋಪ ಹಾಗೂ ಧಾರ್ಮಿಕ ಸಭೆ ಮತ್ತು ಜಂಗಮ ವಟುಗಳಿಗೆ ಸಾಮೂಹಿಕ ಅಯ್ಯಾಚಾರ ದೀಕ್ಷೆ ಜರುಗಲಿದೆ ಎಂದು ಧಾರವಾಡ ವೀರಶೈವ ಜಂಗಮ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಹಿರೇಮಠ ಟ್ರಸ್ಟ್ ಸದಸ್ಯ ಜಿ.ಆರ್.ಹಿರೇಮಠ ತಿಳಿಸಿದರು.
ಅವರು ಧಾರವಾಡದ ಸರಕಾರಿ ನೌಕರ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.

ಅಯ್ಯಾಚಾರ ದೀಕ್ಷಾ ನಿಮಿತ್ತ ಜಂಗಮ ವಟುಗಳಿಗೆ ಸಂಸ್ಕಾರದೊಂದಿಗೆ ಸಾಮೂಹಿಕ ಉಚಿತ ಅಯ್ಯಾಚಾರ ದೀಕ್ಷೆ ನೀಡಲು ನಿರ್ಧರಿಸಲಾಗಿದೆ ಎಂದರು.

ಇದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಧಾರವಾಡ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿಮರದ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಸಂಸ್ಕಾರ ಶಿಬಿರ ನಡೆಸಲು ಲಿಂಗಾಯತ ಭವನದ ಶ್ರೀ ಕುಮಾರೇಶ್ವರ ಸಭಾಭವನವನ್ನು ನೀಡಿದ್ದಾರೆ ಎಂದರು.

ಈ ಶಿಬಿರ ಮೇ 3 ರಂದು ಬೆಳಿಗ್ಗೆ ಆರಂಭವಾಗಲಿದ್ದು, ಸಂಸ್ಕಾರ ಶಿಬಿರವನ್ನು ಅಮ್ಮಿನಭಾವಿ ಪಂಚಗೃಹ ಹಿರೇಮಠದ ಡಾ.ಅಭಿನವ ಶಾಂತಲಿಂಗ ಶಿವಾಚಾರ್ಯಯರು ಉದ್ಘಾಟಿಸಲಿದ್ದಾರೆ.

ಶಿಬಿರವು 5 ದಿನಗಳ ಕಾಲ ನಡೆಯಲಿದ್ದು, ಮೇ 7ರ ಸಂಜೆ ಮುಕ್ತಾಯಗೊಳ್ಳಲಿದೆ.
ಮೇ 8 ರ ಬೆಳಗಿನ ಜಾವ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷಾ ಸಂಸ್ಕಾರಗಳು ನಡೆಯುತ್ತವೆ.

ಅಮ್ಮಿನಭಾವಿ ಪಂಚಗೃಹ ಹಿರೇಮಠದ ಡಾ.ಅಭಿನವ ಶಾಂತಲಿಂಗ ಶಿವಾಚಾರ್ಯರು, ಸುಳ್ಳ ಗ್ರಾಮದ ಪಂಚಗೃಹ ಹಿರೇಮಠದ ಅಭಿನವ ಸಿದ್ದರಾಮ ಶಿವಾಚಾರ್ಯರು ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡುತ್ತಾರೆ.ಬಾಲಕಿಯರಿಗೆ, ಮಹಿಳೆಯರಿಗೆ ಶಿವಾಚಾರ್ಯರು ಶಿವ ದೀಕ್ಷೆ ಕೊಡುತ್ತಾರೆ.

ಅಯ್ಯಾಚಾರ ದೀಕ್ಷೆ ಪಡೆದ ವಟುಗಳು ನಂತರ ಲಿಂಗಾಯತ ಭವನ ಹಿಂಭಾಗದ ಚನ್ನಬಸವೇಶ್ವರ ಹಾಗೂ ಉಳವಿ ಚನ್ನಬಸವೇಶ್ವರ ನಗರದಲ್ಲಿ ಕಂತಿ ಭಿಕ್ಷೆ , ಶಿವದರ್ಶನ ಮಾಡಲಿದ್ದಾರೆ ಎಂದರು.

ನಂತರ 9:30 ಗಂಟೆಗೆ ಬಾಳೆಹೊನ್ನುರು ರಂಭಾಪುರಿ ಪೀಠದ 1008 ಜಗದ್ಗುರು ಪ್ರಸನ್ ರೇಣುಕ ಶ್ರೀ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯವಹಿಸಿ, ಶಿಬಿರದಲ್ಲಿ ಭಾಗವಹಿಸಿದ ವಟುಗಳಿಗೆ ಪ್ರಮಾಣಪತ್ರ, ಶ್ರೀ ರೇಣುಕಾಚಾರ್ಯ ಮೂರ್ತಿ ನೀಡಲಿದ್ದಾರೆ.

ನಂತರ ಜಗದ್ಗುರುಗಳು ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ, ಆಶಿರ್ವಚನ ನೀಡಲಿದ್ದಾರೆ.
ಶಿಬಿರದಲ್ಲಿ ಪಾಲ್ಗೊಳ್ಳಲು ಮತ್ತು ಅಯ್ಯಾಚಾರ ದೀಕ್ಷೆ ಪಡೆಯಲು ಧಾರವಾಡ, ಹಾವೇರಿ, ಬಾಗಲಕೋಟ, ಬೆಳಗಾವಿ,ವಿಜಯಪುರ, ಕೊಪ್ಪಳ, ಗದಗ,ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವಟುಗಳು ತಮ್ಮ ಹೆಸರು ನೊಂದಾಯಿಸಿದ್ದಾರೆ.

ಹೆಸರು ನೊಂದಣಿಗೆ ಮೇ 1,2022 ಕೊನೆಯ ದಿನವಾಗಿದ್ದು,
ಅಯ್ಯಾಚಾರ ದೀಕ್ಷೆ ಪಡೆಯಬಯಸುವ ಜಂಗಮ ವಟುಗಳು ಬಸಯ್ಯ ಹಿರೇಮಠ – 6360115512
ಪ್ರಶಾಂತ ರಾಜಗುರು – 9845216997
ಗುರು ಹಿರೇಮಠ – 9880302077
ಎಸ್.ಜೆ.ಹಿರೇಮಠ –
97427 58110
ಹಾಗೂ ಟ್ರಸ್ಟ್ –
82966 77619 ದೂರವಾಣಿಗೆ ಕರೆ ಮಾಡಿ ಹೆಸರು ನೊಂದಾಯಿಸಬಹುದು ಎಂದರು.
ಸಂಸ್ಕಾರ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 50 ಕ್ಕೂ ಹೆಚ್ಚು ವಟುಗಳು ಭಾಗವಹಿಸಲಿದ್ದು, 80 ಕ್ಕೂ ಹೆಚ್ಚು ಬಾಲವಟುಗಳು ಅಯ್ಯಾಚಾರ ದೀಕ್ಷೆ ಮತ್ತು ಬಾಲಕಿಯರು, ಮಹಿಳೆಯರು ಶಿವ ದೀಕ್ಷೆ ಪಡೆಯಲಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ,
ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಲಿಂಗಾಯತ ಸಮಾಜದ ಮುಖಂಡ ಎಸ್. ಎಫ್ ಸಿದ್ದನಗೌಡ್ರ, ಹಿರೇಮಠ ಟ್ರಸ್ಟ್ ಗೌರವಾಧ್ಯಕ್ಷ ಚನ್ನಯ್ಯ ಹಿರೇಮಠ, ವೀರಶೈವ ಜಂಗಮ ಸಂಸ್ಥೆಯ ಉಪಾಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ, ನಿರ್ದೇಶಕರಾದ ಡಾ.ಎಸ್.ಜಿ.ಮಠದ, ಮೃತ್ಯುಂಜಯ ಕೋರಿಮಠ, ಗಂಗಯ್ಯ ಪ್ರಭುಸ್ವಾಮಿಮಠ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ
ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *