ರಾಜ್ಯ

ಧಾರವಾಡದಲ್ಲು ಜೈಲ್ ಭರೋ‌ ಚಳುವಳಿ ನಡೆಸಿದ ಸಾರಿಗೆ ನೌಕರರು

ಧಾರವಾಡ prajakiran.com : ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ತಮ್ಮ ಸಾತ್ವಿಕ ಆಕ್ರೋಶ ವ್ಯಕ್ತಪಡಿಸಲು ಮಂಗಳವಾರ ಜೈಲ್ ಭರೋ ಚಳುವಳಿ ನಡೆಸಿದರು.

ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಿರತ ಸಾರಿಗೆ ನೌಕರರನ್ನು ಪೊಲೀಸರು ಬಂಧಿಸಿ ಆನಂತರ ಸಂಜೆ ವೇಳೆಗೆ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್. ನೀರಲಕೇರಿ, ದಯವಿಟ್ಟು ಯಾರೂ ಗೊಂದಲಕ್ಕೊಳಗಾಗದೆ ಮುಷ್ಕರ ನಿರತ ಸಾರಿಗೆ ನೌಕರರಲ್ಲಿ ಮನವಿ ಮಾಡಿದ್ದಾರೆ.

ಕೋರ್ಟ್ ಆದೇಶದ ಪ್ರತಿ ಸಿಕ್ಕ ಮೇಲೆ ಅದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ತೀರ್ಮಾನಿಸಲಾಗುವದು ಎಂದು ಹೇಳಿದ್ದಾರೆ.

ಈಗ ಎಲ್ಲವನ್ನೂ ನ್ಯಾಯಾಲಯ ತೀರ್ಮಾನಿಸುವ ಸಾಧ್ಯತೆ ಇದೆ .ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಕೋರ್ಟಿನಲ್ಲಿರುವುದರಿಂದ ಸಾರಿಗೆ ಪ್ರಾಧಿಕಾರ ಮುಷ್ಕರ ನಿರತ ಸಾರಿಗೆ ನೌಕರರ ಮೇಲೆ ಎಷ್ಟೋ ಕಾನೂನು ಬಾಹಿರ ದಮನ ಕ್ರಮಗಳಾದ ,ವಜಾ, ವರ್ಗಾವಣೆ,ಸುಳ್ಳು ಮೊಕದ್ದಮೆಗಳು , ಅಮಾನತು ಏನೆಲ್ಲ ಆದೇಶ ಮಾಡಿದ್ದು ಅವೆಲ್ಲವನ್ನೂ ರದ್ದು ಮಾಡಿ ನಿಗಮ ಹಿಂತಗೆದುಕೊಳ್ಳುವ ಆದೇಶ ಮಾಡಬೇಕಿದೆ.

ಮುಷ್ಕರಕ್ಕಿಂತ ಮೊದಲಿನಂತೆ ನೌಕರರು ಸುರಕ್ಷಿತ ಬಗ್ಗೆ ನಾವು ಆದ್ಯತೆಯನ್ನು ಕೊಡಲೇಬೇಕಾಗಿದೆ.ಅಲ್ಲಿಯವರೆಗೂ ಎಲ್ಲ ಮುಷ್ಕರ ನಿರತ ಸಾರಿಗೆ ನೌಕರರು ಸತ್ಯಾಗ್ರಹ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ವದಂತಿಗಳಿಗೆ ಕಿವಿಗೊಡಬೇಡಿ ಸತ್ಯಾಗ್ರಹ ಎಂದಿನಂತೆ ಮುಂದುವರೆಯುವದು ಎಂದು
ವಾಯುವ್ಯ ಸಾರಿಗೆ ವಲಯ ಸಂಸ್ಥೆ (NWKRTC) ಗೌರವಾದ್ಯಕ್ಷ .ಪಿ ಎಚ್ ನೀರಲಕೇರಿ ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *