hubli kims
ರಾಜ್ಯ

ಹುಬ್ಬಳ್ಳಿ ಕಿಮ್ಸ್ ನ ಮತ್ತೋಬ್ಬ ಡಾಕ್ಸರಗೂ ಕರೋನಾ ಕಂಟಕ …!





ಹುಬ್ಬಳ್ಳಿ prajakiran.com : ಉತ್ತರ ಕರ್ನಾಟಕ ಭಾಗದ ಹಾಗೂ ವಿಶೇಷವಾಗಿ ಧಾರವಾಡ ಜಿಲ್ಲೆಯ ಏಕೈಕ ಆಶಾಕಿರಣವಾಗಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೋನಾ ಕಾಟ ನೀಡುತ್ತಿದೆ.

ಜಿಲ್ಲೆಯ 260ಕ್ಕೂ ಹೆಚ್ಚು ಕರೋನಾ ಸೋಂಕಿತರನ್ನು ಗುಣಮುಖರನ್ನಾಗಿ ಮನೆಗೆ ಕಳುಹಿಸಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರಿಗೂ ಕರೋನಾ ಕಾಡುತ್ತಿದೆ.




ಮಂಗಳವಾರವಷ್ಟೇ ಕಿಮ್ಸ್ ಕ್ಯಾಂಪಸ್ ನ ಮೂವರು ಸಿಬ್ಬಂದಿ ಹಾಗೂ ಕೋವಿಡ್ ಸೆಂಟರ್ ನಲ್ಲಿ ಮೂವರು ನರ್ಸ್ ಗಳು ಸಹ ಸೋಂಕಿನಿಂದ ಬಳಲುತ್ತಿದ್ದರು.

ಕಳೆದ ಹಲವು ದಿನಗಳ ಹಿಂದೆಯಷ್ಟೇ  ಧಾರವಾಡದ ಕೆಂಪಗೇರಿಯಲ್ಲಿ ವಾಸಿಸುವ ವೈದ್ಯರಿಗೂ ತಗುಲಿದ್ದ ಕರೋನಾ ಇದೀಗ ತನ್ನ ವ್ಯಾಪ್ತಿ ವಿಸ್ತರಿಸಿದ್ದು, ಮತ್ತೊಬ್ಬ ವೈದ್ಯರಿಗೂ ಹರಡಿದೆ.




ಕಿಮ್ಸ್ ಹಿರಿಯ ವೈದ್ಯರೊಬ್ಬರಿಗೆ ಕರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇವರೊಂದಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಸೋಂಕಿನ ಲಕ್ಷಣಗಳು ಕಂಡು ಬಂದಿವೆ ಎಂದು ಗೋತ್ತಾಗಿದೆ.

ಇದೀಗ ಅವರಿಂದ ಇನ್ನೇಷ್ಟು ಜನರಿಗೆ ಕರೋನಾ  ತಗುಲಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಎಷ್ಟು ಜನ ಬಂದಿದ್ದಾರೆ ಎಂಬುದು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ. ಅವರನ್ನು ಹೋಂ ಕ್ವಾರಂಟಿನ್ ಹಾಗೂ ಗಂಟಲು ದ್ರವ ತಪಾಸಣೆಗೆ ಮುಂದಾಗಿದೆ.



ಇದರಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಆತಂಕಗೊಂಡಿದೆ.

, ಅವರಿಂದ ಎಲ್ಲಿ ತಮಗೂ ಕರೋನಾ ಸೋಂಕು ಹರಡುತ್ತೋ ಎಂದು ಭಯಭೀತರಾಗಿದ್ದಾರೆ.

ಅಲ್ಲದೆ, ಕರೋನಾ ಸಂಕಷ್ಟದ ನಡುವೆಯೇ ಪ್ರತಿನಿತ್ಯ ತಮ್ಮ ಕಾಯಕಕ್ಕೆ ಹಾಜರಾಗುತ್ತಿದ್ದಾರೆ.

 ಕರೋನಾ ಸೋಂಕಿತರನ್ನು ತಪಾಸಣೆ ಮಾಡಿಅವರನ್ನು ಗುಣಮುಖರನ್ನಾಗಿ ಮನೆಯತ್ತ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿರುವುದು ಶ್ಲಾಘನೀಯ .




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *