ಅಪರಾಧ

ಹುಬ್ಬಳ್ಳಿ : ಬಾತ್‌ರೂಂನಲ್ಲಿದ್ದ ಕೀಲಿ ತೆಗೆದುಕೊಂಡು ಕೈಚಳಕ ತೋರಿಸಿದ ಕಳ್ಳ…..!

ಹುಬ್ಬಳ್ಳಿ prajakiran.com : ಮನೆ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ಮನೆ ಪಕ್ಕದ ಸ್ನಾನದ ಕೋಣೆಯಲ್ಲಿ ಇಟ್ಟು ಹೋಗಿದ್ದನ್ನು ಗಮನಿಸಿದ ಖದೀಮರು, ಸಲೀಸಾಗಿ ಮನೆ ಕಳವು ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮರಾಠಾಗಲ್ಲಿ ಗಜಾನನ ಹೋಟೆಲ್ ಪಕ್ಕದ ಮನೆ ಬಿಲ್ಡಿಂಗ್‌ ನ ಎರಡನೇ ಮಹಡಿಯಲ್ಲಿ  ಈ ಕೈ ಚಳಕ ತೋರಿಸಲಾಗಿದೆ.

ರಾಜೇಶ ಮಾನೆ ಎಂಬುವವರಿಗೆ ಸೇರಿದ್ದ ಮನೆ ಇದಾಗಿದ್ದು, ಸಂಜೆ ಮನೆಗೆ ಬೀಗ ಹಾಕಿ , ಪಕ್ಕದ ಬಾತ್ ರೂಂನಲ್ಲಿ ಕೀಲಿ ಇಟ್ಟು ತೆರಳಿದ್ದರು.

ಇದನ್ನು ಗಮನಿಸಿದ ಕಳ್ಳರು ಆ ಕೀಲಿಯನ್ನು ಬಳಸಿಕೊಂಡು ಮನೆ ಒಳಗೆ  ತೆರಳಿ ಟಿಜೋರಿ ಮೇಲಿಟ್ಟಿದ್ದ ಕೀಲಿಯೂ ಅವರಿಗೆ ಸಿಕ್ಕಿತ್ತು.

ಮನೆಯಲ್ಲಿದ್ದ 8 ಗ್ರಾಂ ಚಿನ್ನಾಭರಣ , 51 ಸಾವಿರ ನಗದು ಹಾಗೂ 1 ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದಾರೆ.

ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *