ರಾಜ್ಯ

ಮನೆಗೆಲಸದ ಮಹಿಳೆಯರಿಗೂ “ಕೋವಿಡ್ ೧೯ ಸಹಾಯಧನ” ನೀಡಿ

ಧಾರವಾಡ prajakiran.com : ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್ಡೌನ್‌ನಿಂದ  ಹಲವಾರು ಅಸಂಘಟಿತ ಕಾರ್ಮಿಕರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.

 ಮನೆಗೆಲಸ ಮಾಡಿ ಜೀವನ ನಿರ್ವಹಿಸುವ ಮಹಿಳೆಯರು ಕೂಡ ಈ ಗುಂಪಿಗೆ ಸೇರುತ್ತಾರೆ. ಕಳೆದ ಎರೆಡು ಮೂರು ತಿಂಗಳು ಅವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಅವರಲ್ಲಿ ಹಲವಾರು ಮಂದಿ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿಯಲ್ಲಿಯೂ ಸಹ ನೋಂದಾಯಿಸಿಕೊಂಡಿದ್ದಾರೆ.




ಈ ಸಮಯದಲ್ಲಿಯು ಕರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿರುವ ಕಾರಣ ಎಷ್ಟೋ ಮನೆಗಳಲ್ಲಿ ಕೆಲಸಕ್ಕೆ ಬಾರದಿರುವಂತೆ ತಿಳಿಸಿರುತ್ತಾರೆ.

ಇಂತಹ ಸಂಕಷ್ಟದ ಸಂಧರ್ಭದಲ್ಲಿ ಅವರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಬೇಕು. ಸರ್ಕಾರ ತನ್ನ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹಣ ಒದಗಿಸಿ ಇತರೆ ಕಾರ್ಮಿಕರಿಗೆ “ಕೋವಿಡ್ ೧೯ ಸಹಾಯಧನ” ನೀಡಿದಂತೆ ಮನೆಗೆಲಸದ ಮಹಿಳೆಯರಿಗೂ ನೀಡಬೇಕು.





#
ಜೊತೆಗೆ ಅವರು ಮನೆ ಕೆಲಸಕ್ಕಾಗಿ ಬೇರೆ-ಬೇರೆ ಪ್ರದೇಶ, ಬಡಾವಣೆಗಳಿಗೆ ಹೋಗುವುದರಿಂದ ಅವರಿಗೆ ಬಸ್‌ಪಾಸನ್ನು ರಿಯಾಯಿತಿ ದರದಲ್ಲಿ ನೀಡಬೇಕೆಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಧುಲತಾ ಗೌಡರ್,ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷೆ ಗಂಗೂಬಾಯಿ, ಜಂಟಿ ಕಾರ್ಯದರ್ಶಿ ದೇವಮ್ಮ ಉಪಸ್ಥಿತರಿದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *