ನವದೆಹಲಿ prajakiran.com : ದೇಶದಲ್ಲಿ ಆಮ್ಲಜನಕ ಅಥವಾ ಲಸಿಕೆಗಳ ಕೊರತೆಯಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಹೇಳಿಕೆಯಿಂದ ನಮಗೆ ಗಾಬರಿಯಾಗಿದೆ ಎಂದಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಕಿಡಿಕಾರಿದ್ದಾರೆ.
ಮಾಧ್ಯಮಗಳು ತಪ್ಪಾಗಿ ಪ್ರಸಾರ ಮಾಡುತ್ತಿವೆಯೇ. ಪತ್ರಿಕೆ ವರದಿಗಳು ಸುಳ್ಳೇ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಚಿದಂಬರಂ ಆಮ್ಲಜನಕ, ಲಸಿಕೆಗಳು ಅಥವಾ ರೆಮೆಡೆಸಿವಿರ್ ಕೊರತೆಯಿಲ್ಲ ಎಂಬ ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ನಾನು ದಿಗಿಲುಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.