ನವದೆಹಲಿ prajakiran.com : ವಿಶ್ವದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಾರದಿರುವುದರಿಂದ ಹಜ್ ಯಾತ್ರೆಗೆ ವಿದೇಶಿಗರು ಭಾಗಿಯಾಗದಂತೆ ಸೌದಿ ಅರೇಬಿಯಾ ಸರ್ಕಾರ ನಿರ್ಬಂಧ ಹೇರಿದೆ.
ಜುಲೈ ನಲ್ಲಿ ಹಜ್ ಯಾತ್ರೆ ಆರಂಭವಾಗಲಿದ್ದು, ವಿದೇಶಿಕರಿಗೆ ಕಡ್ಡಾಯ ನಿರ್ಬಂಧ ಹೇರಿದ ಸೌದಿ ಸರ್ಕಾರ, ಲಸಿಕೆ ಪಡೆದ ತನ್ನ ದೇಶದ 60 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಿದೆ.
18 ರಿಂದ 65 ವರ್ಷದ ಯಾತ್ರಿಕರಿಗೆ ಮಾತ್ರ ಹಜ್ ಯಾತ್ರೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಇದರಿಂದಾಗಿ ಈ ಬಾರಿ ಹಜ್ ಯಾತ್ರೆಗೆ ತೆರಳಬೇಕು ಎಂದು ಸಜ್ಜಾಗಿದ್ದ ದೇಶದ ಲಕ್ಷಾಂತರ ಜನರಿಗೆ ಭಾರೀ ನಿರಾಶೆಯಾಗಿದೆ.