ರಾಜ್ಯ

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ ಪಲಾಯನ ಮಾಡಿದ ಹಂಗಾಮಿ ಮೇಯರ್ ಉಮಾ ಮುಕುಂದ

ರೊಚ್ಚಿಗೆದ್ದ ಪ್ರತಿಭಟನಾಕಾರರು

ಸಾಮಾನ್ಯ ಸಭೆಯಲ್ಲಿ ತೌಡು ಕುಟ್ಟಿದ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು

ತಮ್ಮ ಹಕ್ಕು ಚಲಾಯಿಸದೆ ಮೌನಕ್ಕೆ ಶರಣಾದ ಬಿಜೆಪಿಯ ಸದಸ್ಯರ ವಿರುದ್ಧ ಹೋರಾಟಗಾರರ ಗರಂ

ಅಮರಣ ಉಪವಾಸ ಸತ್ಯಾಗ್ರಹಕ್ಕೆ 14 ಕಾಂಗ್ರೆಸ್ ಸದಸ್ಯರ ಸಂಪೂರ್ಣ ಬೆಂಬಲ

ದೀಪಾ ಸಂತೋಷ ನೀರಲಕಟ್ಟಿ, ಮಯೂರ ಮೊರೆ
ಶಂಭು ಸಾಲಮನಿ, ರಾಜು ಕಮತಿ ಹಾಗೂ ಇತರರು ಸಾಥ್ ನೀಡಿದರು.

ಪಾಲಿಕೆಯ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿ ಪಟ್ಟು ಹಿಡಿದರೂ ಸಭೆಯ ನಿರ್ಣಯ ತಿಳಿಸದೆ ಮಹಾನಗರ ಪಾಲಿಕೆ ಹಂಗಾಮಿ ಮಹಾಪೌರರಾದ ಉಪಮೇಯರ್ ಉಮಾ ಮುಕುಂದ ಹಾಗೂ ಇತರ ಬಿಜೆಪಿ ಸದಸ್ಯರು ಮಹಾನಗರ ಪಾಲಿಕೆ ಆವರಣದಿಂದ ಪ್ರತಿಭಡನಾಕಾರರಿಗೆ ಯಾವುದೇ ಮಾಹಿತಿಯನ್ನು ಸೌಜನ್ಯ ಕ್ಕಾದರೂ ನೀಡದೆ ನಿರ್ಗಮಿಸಿದರು.

ಇದರಿಂದಾಗಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಇನ್ನುಳಿದ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಹೊರಗೆ ಹೋಗದಂತೆ ಎಲ್ಲಾ ಗೇಟ್ ಬಂದ್ ಮಾಡಿ ಅವರನ್ನು ತಡೆದರು‌.

ಇದರಿಂದಾಗಿ ಕಂಗಲಾದ ಕೆಲ ಸಿಬ್ಬಂದಿ ಹಾಗೂ ಸದಸ್ಯರು ಕೌಂಪಾಂಡ್ ಹಾರಿ ಹೊರಗೆ ಹೋದರು‌.

ಪರಿಸ್ಥಿತಿಯನ್ನು ಅರಿತು ಸ್ಥಳಕ್ಕೆ ಆಗಮಿಸಿದ
ಹೆಚ್ಚುವರಿ ಕಮಿಶನರ್
ಶಂಕರಾನಂದ ಬನಶಂಕರಿ ಕೇವಲ ಸಂಬಳ ಬಿಡುಗಡೆ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಮರಣಾಂತ ಉಪವಾಸ ಕೈ ಬಿಡಲು ಒಪ್ಪದ ಬಸವರಾಜ ಕೊರವರ ಹಾಗೂ ಪ್ರತಿಭಟನಾನಿರತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ‌

ಈ ವೇಳೆ ಪಾಲಿಕೆ
ಸದಸ್ಯ ಶಂಕರ ಶೆಳಕೆ ಜೊತೆಗೆ ಮಾತಿನ ಚಕಮಕಿ ನಡೆಯಿತು.
ಪ್ರತಿಭಟನಾನಿರತರರು ಸದಸ್ಯರಿಗೆ ಧಿಕ್ಕಾರ ಕೂಗಿದಾಗ
ನಮಗೇಕೆ ಎಂದು ಪ್ರಶ್ನಿಸಲು ಮುಂದಾದರು‌.

ಇದರಿಂದ ಕೆರಳಿದ ಪ್ರತಿಭಟನಾಕಾರರು ನೀರು ಖಾಸಗಿಕರಣ ವಿರೋಧಿಸದ ನೀವು ನಮ್ಮ ಧ್ವನಿ ಯಾಗಲಿಲ್ಲ ಎಂದು
ತೀವ್ರವಾದ ತರಾಟೆಗೆ ತೆಗೆದುಕೊಂಡರು‌.

ಬಡಮಕ್ಕಳ ಮೇಲೆ ದಬ್ಬಾಳಿಕೆಯ ಸರಿಯಲ್ಲ ಎಂದು ಕಿಡಿಕಾರಿದರು. ಪೊಲೀಸರು ಹಾಗೂ ಮಾಜಿ ಮೇಯರ್ ಅವರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮಹಾನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿದ್ದರಿಂದ ಪೊಲೀಸರು
ಪ್ರತಿಭಟನಾನಿರತರನ್ನು ನಿಯಂತ್ರಣ ಸಾಧಿಸಲು ಪೊಲೀಸರ ಹರಸಾಹಸ ನಡೆಸಿದರು.

ಹೀಗಾಗಿ 250ಕ್ಕೂ ಹೆಚ್ಚು ನೌಕರರ ಬಂಧನ ಮಾಡಿ
ಪೊಲೀಸ್ ಹೆಡ್ ಕ್ವಾರ್ಟರ್ಸ್ ಆವರಣದ ದುರ್ಗಾದೇವಿ ದೇವಾಲಯಕ್ಕೆ ಕರೆದುಕೊಂಡು ಬಂದರು.

ದೇವಾಲಯದ ಆವರಣದಲ್ಲಿಯೇ ಮುಂದುವರಿದ ಹೋರಾಟ
ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ.

ಹೋರಾಟ ಕೈ ಬಿಡುವುದಿಲ್ಲ ಎಂದು ಬಸವರಾಜ ಕೊರವರ ಪಟ್ಟು ಹಿಡಿದರು.
ಆರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ಬಸವರಾಜ ಕೊರವರ ಹಾಗೂ
ನಾಗರಾಜ ಕಿರಣಗಿ
ಅಸ್ವಸ್ಥತೆಗೊಂಡರು. 

ವೈದ್ಯಕೀಯ ತಪಾಸಣೆ ಹಾಗೂ ಹೋರಾಟ ಮುಂದುವರೆದಿದೆ.
ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತವನಪ್ಪ ಅಷ್ಟಗಿ ಅವರು ಉಪವಾಸ ಕೈ ಬಿಡುವಂತೆ ಮನವಿ ಮಾಡಿದರು ಪಟ್ಟು ಸಡಿಲಿಸಿಲ್ಲ. ಅವರು ಒಂದೂವರೆ ಗಂಟೆಗಳಿಂದ ಇಲ್ಲಿಯೇ ಕುಳಿತಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *