ಧಾರವಾಡ prajakiran. com : ಪೂನಾದಿಂದ ಬರುತ್ತಿದ್ದ ಈರುಳ್ಳಿ ತುಂಬಿದ ಲಾರಿಯು ಖಾಲಿ ಗ್ಯಾಸ್ ಹೇರಿಕೊಂಡು ಸವದತ್ತಿ ರಸ್ತೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ, ಗ್ಯಾಸ್ ಲಾರಿಯ ಚಾಲಕ ಸ್ಥಳದಲ್ಲಿ ಸಾವಿಗೀಡಾಗಿ, ಮತ್ತಿಬ್ಬರು ಗಾಯಗೊಂಡ ಘಟನೆ ಬೆಳಗಿನ ಜಾವ ನಾಲ್ಕು ಗಂಟೆಗೆ ಧಾರವಾಡದ ಓಲ್ಡ್ ಡಿಎಸ್ಪಿ ಕ್ರಾಸ್ ನಲ್ಲಿ ಸಂಭವಿಸಿದೆ.
ಈರುಳ್ಳಿ ಲಾರಿ ಮತ್ತು ಗ್ಯಾಸ್ ಲಾರಿ ವೇಗವಾಗಿ ಬಂದ ಪರಿಣಾಮ ನಿಯಂತ್ರಣ ಸಿಗದೇ ಡಿಕ್ಕಿ ಸಂಭವಿಸಿದೆ.
ಲಾರಿಯ ಕೆಳಗೆ ಮೃತ ವ್ತಕ್ತಿಯ ದೇಹ ಸಿಕ್ಕಿದ್ದು ಪೊಲೀಸರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಶವವನ್ನ ಆಸ್ಪತ್ರೆ ಶವಾಗಾರಗೆ ಸಾಗಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಸಂಚಾರಿ ಠಾಣೆ ಪೊಲೀಸರು, ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.