ರಾಜ್ಯ

ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ರೈತ ಹಿತರಕ್ಷಣಾ ಪರಿವಾರ ಸಮಿತಿಯಿಂದ ಸರದಿ ಧರಣಿ

ಧಾರವಾಡ prajakiran. com : ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ಮತ್ತು ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಹಿತರಕ್ಷಣಾ ಪರಿವಾರ ಸಮಿತಿಯಿಂದ ಸರದಿ ಧರಣಿ ಆರಂಭಿಸಲಾಯಿತು.

ಸೋಮವಾರ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸರದಿ ಧರಣಿಯ ಮೊದಲ ದಿನ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಹಾಗೂ ಹಿರೇ ಮಲ್ಲಿಗವಾಡ ಗ್ರಾಮದ ರೈತರು ಭಾಗವಹಿಸಿದ್ದರು.

ಸರದಿ ಧರಣಿಗೆ ಚಾಲನೆ ನೀಡಿ ಮಾತನಾಡಿದ ಚಿಂತಕ ಡಾ.ರಂಜಾನ ದರ್ಗಾ, ಕೇಂದ್ರ ಸರಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಸಂಬಂಧಿ ಕಾನೂನುಗಳು ಕೃಷಿಕರನ್ನು ಕೂಲಿಕಾರರನ್ನಾಗಿ ಮಾಡಲಿವೆ.

ಶ್ರೀಮಂತ ಉದ್ದಿಮೆದಾರರು ಕೃಷಿ ವಲಯದಲ್ಲಿ ಬಂಡವಾಳ ಹೂಡಲು ಈ ಕಾಯ್ದೆಗಳಲ್ಲಿ ಅವಕಾಶ ಕಲ್ಪಿಸುವುದರಿಂದ ದೇಶದ ಇಡೀ ಕೃಷಿ ವ್ಯವಸ್ಥೆಗೆ ಧಕ್ಕೆಯಾಗಲಿದೆ.

ಸರಕಾರದ ಉದ್ದೇಶಿತ ಕಾಯ್ದೆ ಗಳಲ್ಲಿ ದೇಶ ಮಾತ್ರವಲ್ಲದೇ ವಿದೇಶಿ ಬಂಡವಾಳುದಾರರು ಹಣ ತೊಡಗಿಸಿ ಲಾಭ ಮಾಡಿಕೊಳ್ಳುವರು.

ಇನ್ನೊಂದೆಡೆ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಪಡೆಯಲು ಸಾಧ್ಯವಾಗದೇ, ಕೃಷಿಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣ ಆಗಲಿದೆ.

ಆದ್ದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಹುನ್ನಾರದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ದರ್ಗಾ ಹೇಳಿದರು.

ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ,
ಮುಖಂಡರಾದ ಶ್ರೀಶೈಲಗೌಡ
ಕಮತರ, ಉಳವಪ್ಪ ಒಡೆಯರ,
ಶ್ರೀಮಂತಪ್ಪ ಚೌರದ, ಮಾರುತಿ ಕೋರಿ, ಶಿವಾಜಿ ಜಾಧವ, ಲಕ್ಷ್ಮಣ ಬಕ್ಕಾಯಿ, ಕರಿಯಪ್ಪ ಚಿಕ್ಕಣ್ಣವರ, ಸುರೇಖಾ ದೇವಿ, ಅಬ್ದುಲ್ ಖಾನ್, ಬಸಪ್ಪ ಚೌರದ್, ನಾಗಪ್ಪ ಅರಳಿಕಟ್ಟಿ, ಭೀಮಪ್ಪ ಕನಾಜನವರ, ಸುಭಾಷ್ ಕೋರಿ, ಮಹಾದೇವಪ್ಪ ಮಾಕಣ್ಣವರ, ಮಾರುತಿ ಕೆರಿಮನಿ, ಸಿದ್ದಪ್ಪ ತಳವಾರ, ಅಜ್ಜಪ್ಪ ರೆಡ್ಡಿಗೇರಿ, ಅಡಿವೆವ್ವ ಗರಗದ, ಕರೆವ್ವ ಬೆಂಡಿಗೇರಿ, ಬಸವಣ್ಣೆವ್ವ ನರೇಂದ್ರ, ಶಾಂತವ್ವ ಕುರಬೆಟ್ಟ, ಬಸವ್ವ ಲಕ್ಕಣ್ಣವರ, ನಾಗವ್ವ ದಳವಾಯಿ, ಮೈಲಾರಿ ಚಿಕ್ಕಣ್ಣವರ, ಮಡಿವಾಳಪ್ಪ ಬೆಟಗೇರಿ, ಮಲ್ಲಪ್ಪ ಚೌರದ, ಬಾಳಪ್ಪ ಹಡಪದ, ಅಡಿವೆಪ್ಪ ಅಂಗಡಕಿ, ಮಲ್ಲಿಕಾರ್ಜುನ ಹುಚ್ಚಯ್ಯನವರ, ನಾಗಪ್ಪ ಮೇಟ್ಯಾಲ್, ಮಹದೇವ ದೊಡ್ಡಮನಿ,ಬಸವರಾಜ ಸುತಗಟ್ಟಿ, ನಿಂಗಪ್ಪ ದೇವಗಿರಿ ಮತ್ತಿತರರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *