ಅಂತಾರಾಷ್ಟ್ರೀಯ

ಧಾರವಾಡದ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್ ವಿತರಣೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಿಂದ ವಿತರಣೆಗೆ ಚಾಲನೆ

ಧಾರವಾಡದ ಮೂರು ಕಡೆ ಕಾರ್ಯಕ್ರಮ ಆಯೋಜನೆ

ಇಸ್ಮಾಯಿಲ್ ತಮಟಗಾರ ಸಾಥ್

ಧಾರವಾಡ prajakiran.com : ಧಾರವಾಡದ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಸದಸ್ಯರು ಆಗಿರುವ ದೀಪಕ ಚಿಂಚೋರೆ ಅವರ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ 74 ರ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ 500ಕ್ಕೂ ಹೆಚ್ಚು ಜನರಿಗೆ ಸೋಮವಾರ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಧಾರವಾಡದ ಅಂಜುಮನ್ ಸಂಸ್ಥೆ ಆವರಣದಲ್ಲಿ ನೂರಾರು ಆಟೋ ರೀಕ್ಷಾ ಚಾಲಕರಿಗೆ, ಎಮ್ಮಿಕೇರಿಯ ಸೀತಾರಾಮ ದೇವಸ್ಥಾನದಲ್ಲಿ ನೂರಾರು ಅಡುಗೆ ತಯಾರಕರು, ಅಡುಗೆ ಸಹಾಯಕರು ಅರ್ಚಕರು ಹಾಗೂ ರಾಯಾಪುರದಲ್ಲಿ ನೂರಾರು ನಿರಾಶ್ರಿತರಿಗೆ ಹೀಗೆ ಒಟ್ಟು ಐದನೂರಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ಈ ಆಹಾರ ಕಿಟ್ ವಿತರಣೆಗೆ ಮುಂದಾದ ಧಾರವಾಡದ ಕಾಂಗ್ರೆಸ್ ಮುಖಂಡರು ಹಾಗೂ ಎಐಸಿಸಿ ಸದಸ್ಯರು ಆಗಿರುವ ದೀಪಕ ಚಿಂಚೋರೆ ಅವರಿಗೆ ಅಭಿನಂದಿಸಿದರು.

 

ಅಲ್ಲದೆ, ಸ್ಥಳೀಯ ಎಲ್ಲಾ ಕಾಂಗ್ರೆಸ್
ಮುಖಂಡರು ಜನರ ನೋವು, ನಲಿವಿಗೆ ಸ್ಪಂದಿಸಬೇಕು. ಅವರ ಅಹವಾಲು ಗಳನ್ನು ಆಲಿಸಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕರೋನಾ ದಿಂದ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕಾಗಿರುವುದು ಸದ್ಯದ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮಾತನಾಡಿ, ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಾವಿರಾರು ಜನರಿಗೆ ಆಹಾರ ಕಿಟ್ ಒದಗಿಸುವ ಗುರಿ ಹೊಂದಲಾಗಿದೆ‌.

ಈ‌ ಕಿಟ್ ನಲ್ಲಿ ಅಕ್ಕಿ, ಎಣ್ಣಿ, ಸಕ್ಕರೆ,ತೊಗರಿ ಬೆಳೆ, ಚಹಾಪುಡಿ, ಆಲೂಗಡ್ಡೆ, ಉಳ್ಳಾಗಡ್ಡಿ
ಇದೆ‌. ಇದು ಅವರ ತಕ್ಷಣದ ಅಗತ್ಯ ಪೂರೈಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ವಿಧಾನ‌ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಲ್ತಾಫ್ ಹಳ್ಳೂರ, ಇಸ್ಮಾಯಿಲ್ ತಮಟಗಾರ,
ದೇವಕಿ ಯೋಗಾನಂದ, ರಾಬರ್ಟ್ ದದ್ದಾಪುರಿ, ಬಸವರಾಜ ಮಲಕಾರಿ, ರಜತ ಉಳ್ಳಾಗಡ್ಡಿಮಠ, ಸದಾನಂದ ಡಂಗನವರ,
ಶಿವು ಚನ್ನಗೌಡರ, ಬಸವರಾಜ ಕಿತ್ತೂರು, ರಫೀಕ್ ದರ್ಗಾದ, ತಾನಾಜಿ ಶೀರ್ಕೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *