ಧಾರವಾಡ prajakiran.com :
ಧಾರವಾಡ ಜಿಲ್ಲೆಯ ಜಿಪಂ ಸದಸ್ಯ
ಯೋಗೇಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ
ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ಡಿ. ೪ಕ್ಕೆ ಮುಂದೂಡಿಕೆಯಾಗಿದೆ.
ವಿನಯ ಕುಲಕರ್ಣಿ ಪರ ವಕೀಲ ಬಾಹುಬಲಿ ಅವರು ಗುರುವಾರ (ನಿನ್ನೆ) ಧಾರವಾಡದ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡದ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶೆಯರಾದ ಶ್ರೀಮತಿ ಎಂ. ಪಂಚಾಕ್ಷರಿ ಅವರು ವಿಚಾರಣೆ ನಡೆಸಿ, ಸಿಬಿಐ ಪರ ವಕೀಲರಿಗೆ ತಕರಾರು ಅರ್ಜಿ ಸಲ್ಲಿಸಲು ಸೂಚಿಸಿದರು.
ಬಳಿಕ ಡಿಸೆಂಬರ್ 4ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದರು.
ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿನಯ್ ಪರ ವಕೀಲರು ವಾಪಸ್ ಪಡೆದಿದ್ದರು.
ಇದೀಗ ಹೊಸ ಜಾಮೀನು ಅರ್ಜಿ ಸಲ್ಲಿಸಿರುವುದರಿಂದ ಡಿ. 4ರತ್ತ ಎಲ್ಲರ ಚಿತ್ತ ನೆಟ್ಟಿದೆ.