ಬಳ್ಳಾರಿ ಶಾಸಕ ಭರತರೆಡ್ಡಿ ಮನೆ ಸೇರಿ
4 ಕಡೆ ಇಡಿ ದಾಳಿ
*ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ನೀಡಿದ್ದ ಶಾಸಕ ಭರತ ರೆಡ್ಡಿ*
ಬಳ್ಳಾರಿ ಪ್ರಜಾಕಿರಣ.ಕಾಮ್ :
ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾ.ರಾ. ಭರತ ರೆಡ್ಡಿ ಮನೆ ಸೇರಿದಂತೆ
4 ಕಡೆ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳ ದಾಳಿ ನಡೆದಿದೆ.
ಶಾಸಕ ನಾರಾಭರತ ರೆಡ್ಡಿ ಮನೆ, ತಂದೆ ಸೂರ್ಯನಾರಾಯಣ ರಡ್ಡಿ ಕಚೇರಿ, ಶಾಸಕರ ಚಿಕ್ಕಪ್ಪ ಪ್ರತಾಪರೆಡ್ಡಿ ಮನೆ ಮತ್ತು ಕಚೇರಿಯ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಇಂದು ಬೆಳಿಗ್ಗೆ 6.30ರಿಂದ ನಾಲ್ಕು ಕಡೆ ಏಕಾಏಕಿ ದಾಳಿ ನಡೆದಿದೆ.
ಬೆಂಗಳೂರಿನಿಂದ ಆಗಮಿಸಿದ ಹತ್ತಾರು ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಪಾಸಿಂಗ್ ವಾಹನಗಳಲ್ಲಿ ಆಗಮಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳ್ಳಗೆಯಿಂದಲೇ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಹಿಂದೆ ಶಾಸಕ ಭರತರಡ್ಡಿ ತಮ್ಮ ಹುಟ್ಟು ಹಬ್ಬಕ್ಕೆ ಇಡೀ ಬಳ್ಳಾರಿ ನಗರದ ಮನೆ ಮನೆಗೆ ಕುಕ್ಕರ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.