ರಾಜ್ಯ

ಧಾರವಾಡ ಮಹಿಳಾ ಕಾನ್ಸಟೇಬಲ್ ಈಗ ಪಿ ಎಸ್ ಐ

ಪಿ ಎಸ್ ಐ ಅಷ್ಟೇ ಅಲ್ಲ ಕೆ ಎ ಎಸ್ ನಲ್ಲೂ ಸಾಧನೆಯ ವಿಶ್ವಾಸ

ಈ ಸಾಧನೆಗೆ 7 ವರ್ಷದ ಮಗಳು ಶ್ರಾವಣಿಯೇ ಸ್ಪೂರ್ತಿ

ಕಷ್ಟ ಪಟ್ಟು ಓದಿ ಸಾಧನೆ ಮಾಡಿದ ಭಾರತಿ ಕುರಿ

ಧಾರವಾಡ prajakiran.com : ಧಾರವಾಡದ ಶಹರ ಪೊಲೀಸ್ ಠಾಣೆಯ ಮಹಿಳಾ ಕಾನ್ಸಟೇಬಲ್ ಒಬ್ಬರು ಕೆಲಸ ಮಾಡುತ್ತಲೇ ಕಷ್ಟ ಪಟ್ಟು ಓದಿ ಪಿ ಎಸ್ ಐ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.

ನಿನ್ನೆ ಪ್ರಕಟಗೊಂಡ ಪಿ ಎಸ್ ಐ ಫಲಿತಾಂಶದಲ್ಲಿ 22ನೇ ಸ್ಥಾನ ಪಡೆದಿರುವ ಭಾರತಿ ಕುರಿಯೇ ಈ ಸಾಧನೆ ಮಾಡಿದ ಪೊಲೀಸ್ ಕಾನ್ಸಟೇಬಲ್ ಆಗಿದ್ದಾರೆ.

ಕೋವಿಡ್ ಸಂದರ್ಭದಲ್ಲೂ ಕರ್ತವ್ಯ ಮಾಡುತ್ತಲೇ ನಿರಂತರ ಪ್ರಯತ್ನದಿಂದ ಈ ಸಾಧನೆ ಮಾಡಿದ್ದು, ಮಹಿಳೆಯರು ಮದುವೆ, ಮಕ್ಕಳು ಎಂದು ಓದುವುದನ್ನು ಬಿಡದೆ ನಿರಂತರ ಪರಿಶ್ರಮ ಹಾಗೂ ಯಾವುದೇ ಸಮಸ್ಯೆ ಬಂದರೂ ಎದೆಗುಂದದೆ ಪ್ರಯತ್ನ ಮಾಡಿದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದರು.

ಅಲ್ಲದೆ ತಮ್ಮ ಈ ಸಾಧನೆಗೆ 7 ವರ್ಷದ ಮಗಳು ಶ್ರಾವಣಿಯೇ ಸ್ಪೂರ್ತಿ ಎಂದು ಪ್ರಜಾಕಿರಣ.ಕಾಮ್ ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು.

ತಾಯಿ ಜೊತೆಗೆ ಮಗಳು ಧಾರವಾಡ ಶಹರ ಪೊಲೀಸ್ ಸ್ಟೇಶನ್ ಗೆ ಬಂದಾಗ ಹಿರಿಯಅಧಿಕಾರಿಗಳಿಗೆ ಸ್ಟಾರ್ ಇವೆ. ನಿನಗೆ  ಎರಡು ಸ್ಟಾರ್ ಯಾವಾಗ ಬರುತ್ತದೆ ಎಂದು ಕೇಳಿದ್ದಳು.

ಇದರಿಂದ ಪುಳಕಿತಗೊಂಡ ಭಾರತಿ ಕುರಿ ಮಗಳ ಶ್ರಾವಣಿಗಾಗಿ ಎರಡು ಸ್ಟಾರ್ ಪಡೆಯಲೇ ಬೇಕು ಎಂದು ನಿರಂತರ ಓದಿ ಈಗ ಎರಡು ಸ್ಟಾರ್ ಪಡೆಯಲು ಸಜ್ಜಾಗಿದ್ದಾರೆ.

ಜೊತೆಗೆ ಬಡತನದಿಂದ ಬಂದ ಬಂದ ಭಾರತಿ ಕುರಿ ಕುಟುಂಬ ಮೂಲತಃ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯವರು.

ಕಡುಬಡತನದಲ್ಲೂ ತಂದೆ  . ತಂಗಿ ಪೊಲೀಸ್ ಅಣ್ಣ ಆರ್ಮಿ ಅತ್ತಿಗೆ ಅಂಗನವಾಡಿ ಟೀಚರ್ ತಂದೆ ಬಸಪ್ಪ ಕುರಿ ತಾಯಿ ರುಕ್ಮಣಿ ಕುರಿ ವ್ಯವಸಾಯ ಮಾಡುತ್ತಲೇ ಮಾಡುತ್ತಲೇ ಸಾಕಿ ಸಲುಹಿದ್ದಾರೆ.

ಅಣ್ಣ  ವಿಠ್ಟಲ ಭಾರತೀಯ ಸೇನೆಯಲ್ಲಿದ್ದರೆ, ಅತ್ತಿಗೆ ಅಂಗನವಾಡಿ ಟೀಚರ್ ಇದ್ದಾರೆ. ತಂಗಿ ಗಂಗಾ ಬೆಂಗಳೂರು ಟ್ರಾಫೀಕ್ ಪೊಲೀಸ್ ಆಗಿದ್ದಾರೆ.

ಧಾರವಾಡ ಪೊಲೀಸ್ ಠಾಣೆಯ ಮಹಿಳಾ ಕಾನ್ಸಟೇಬಲ್ ಆಗಿರುವ ಭಾರತಿ ಕುರಿ ಗಂಡ ರವಿ ಬಾಗಿ ಖಾಸಗಿ ಕಂಪನಿ ನೌಕರರಾಗಿದ್ದಾರೆ.

ತಮ್ಮ ಸಾಧನೆಗೆ ಕುಟುಂಬದ ಸಂಪೂರ್ಣ ಸಹಾಯ, ಸಹಕಾರ, ಜೊತೆಗೆ ತಂದೆ ತಾಯಿ ಆರ್ಶಿವಾದವೇ ಕಾರಣ ಎಂದು ಪ್ರಜಾಕಿರಣ.ಕಾಮ್ ಗೆ ವಿವರಿಸಿದರು.

ಇವರ ಈ ಸಾಧನೆಗೆ ನಮ್ಮದೊಂದು ಸೆಲ್ಯೂಟ್. ಸಾಧನೆಗೆ ಯಾವುದು ಅಡ್ಡಿಯಾಗುವುದಿಲ್ಲ. ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಇವರು ಉತ್ತಮ ನಿರ್ದಶನ ಎಂದರೆ ತಪ್ಪಾಗಲಾರದು.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *