rapid antijentest
ರಾಜ್ಯ

ಮಗಳೊಂದಿಗೆ ಕೆಲಸ ನಿರ್ವಹಿಸುತ್ತಿರುವ ಧಾರವಾಡದ ನರ್ಸ …..!

ಕೊರೊನಾಗೆ ಹೆದರದ ನಿಮಗೆ ಹ್ಯಾಟ್ಸಫ್.. ಟು ಯೂ

ನಿಮ್ಮ ಸೇವೆಗೆ ನೀವೇ ಸರಿ ಸಾಟಿ

ಧಾರವಾಡ prajakiran.com : ಕೊರೊನಾ ಅಂದ್ರೇನೆ ಹಾಗೆ ಅದರಿಂದ ಭೀತಿಗೆ ಒಳಗಾಗದ ಜನರೇ ಇಲ್ಲ.

ಯಾರಿಗೋ ಒಬ್ಬರಿಗೆ ಕೊರೊನಾ ಇದೆ ಅಂದ್ರೆ ಅವರಿಂದ ಮಾರುದ್ಧ ಓಡಿ ಹೋಗಿ ನಿಲ್ಲುವಂತಹ ಪರಸ್ಥಿತಿ ಇದೆ.

ಇಂತದ್ದರಲ್ಲಿ ನಮ್ಮ ವೈದ್ಯರು, ನರ್ಸಗಳು ಸೋಂಕಿತರ ಮಧ್ಯೆಯೇ ಇದ್ದು, ಅವರ ಆರೈಕೆ ಮಾಡ್ತಿದ್ದಾರೆ. 

ಧಾರವಾಡದಲ್ಲೊಬ್ಬ ನರ್ಸ ತನ್ನ ಮಗಳೊಂದಿಗೆ ಸಾಮಾಜಿಕ ಸೇವೆಗೆ ಮುಂದಾಗಿರೋದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಸದ್ಯ ನಗರದ ತುಂಬ ಬಸ್ ನಲ್ಲಿ ಆ್ಯಂಟಿಜನ್ ಕಿಟ್ ಮುಖಾಂತರ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.

ಈ ವಾಹನದ ಬಳಿ ಹೋಗುವುದೇ ಒಂದು ಅಪಾಯ ಎಂದು ಜನ ಭಯಭೀತರಾಗಿದ್ದಾರೆ. ಆದ್ರೆ, ಇಂತಹ ಸಂದರ್ಭದಲ್ಲೂ ನರ್ಸ ಒಬ್ಬರು ತಮ್ಮ ಎರಡೂವರೆ ವರ್ಷದ ಪುಟಾಣಿ ಹೆಣ್ಣು ಮಗುವನ್ನು ತಮ್ಮ ಜೊತೆಗೇ ಅದೇ ವಾಹನದಲ್ಲಿ ಕರೆದುಕೊಂಡು ಬಂದು ಜನಸೇವೆ ಮಾಡ್ತಿದ್ದಾರೆ.

ಮನೆಯಲ್ಲಿ ಮಗುವನ್ನು ನೋಡಿಕೊಳ್ಳೋರು ಯಾರೂ ಇಲ್ಲ ಎಂಬ ಕಾರಣಕ್ಕೆ ತಮ್ಮ ಜೊತೆಗೇ ಆ ಮಗುವನ್ನು ಕರೆದುಕೊಂಡು ಬಂದು ಕರ್ತವ್ಯ ನಿರ್ವಹಿಸ್ತಿದ್ದಾರೆ. 

ಇಂತಹ ವಿಷಮ ಸಂದರ್ಭದಲ್ಲಿ ತಮ್ಮ ಪುಟಾಣಿ ಮಗುವನ್ನೂ ಲೆಕ್ಕಿಸದೇ ಕೆಲಸಕ್ಕೆ ಮುಂದಾಗಿರುವ ಆ ನರ್ಸಗೆ ನಾವೊಂದು ಹ್ಯಾಟ್ಸಫ್ ಹೇಳಲೇಬೇಕಲ್ಲವೇ?

pls follow and like us on facebook
https://www.facebook.com/prajakirannews/
PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *