ಧಾರವಾಡ prajakiran.com : ಶುಕ್ರವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಗೊಳಿಸಿರುವ ಹೆಲ್ತ್ ಬುಲೇಟಿನ್ ನಲ್ಲಿ ವಿದ್ಯಾನಗರಿ ಧಾರವಾಡ ಮೂವರು ಮಹಿಳೆಯರಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತರನ್ನು ಪಿ-4530, ಪಿ-4531 ಹಾಗೂ ಪಿ-4532 ಎಂದು ಗುರುತಿಸಲಾಗಿದೆ. ಅವರು ಸೋಂಕಿತ ರೋಗಿಗಳ ಪ್ರಾಥಮಿಕ ಸಂಪರ್ಕಿತರು ಎಂದು ತಿಳಿಸಿದೆ.
ಪಿ-4530 ಸೋಂಕಿತ 53 ವರ್ಷದ ಮಹಿಳೆ ಪಿ-1942, 1943, 1944, ಹಾಗೂ 1945 ರ ಸಂಪರ್ಕ ಹೊಂದಿದ್ದರು. ಅವರು ಧಾರವಾಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಪಿ-4531 ಸೋಂಕಿತ 32 ವರ್ಷದ ಮಹಿಳೆ ಕೂಡ ಪಿ-1942, 1943, 1944, ಹಾಗೂ 1945 ರ ಸಂಪರ್ಕ ಹೊಂದಿದ್ದರು. ಅವರು ಧಾರವಾಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅದೇ ರೀತಿ ಪಿ-4532 ಸೋಂಕಿತ 60 ವರ್ಷದ ಮಹಿಳೆ ಕೂಡ ಪಿ-1942, 1943, 1944, ಹಾಗೂ 1945 ರ ಸಂಪರ್ಕ ಹೊಂದಿದ್ದರು. ಅವರು ಧಾರವಾಡ ಜಿಲ್ಲೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆ ಮೂಲಕ ಧಾರವಾಡ ಜಿಲ್ಲೆಯ ಕರೋನಾ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾದಂತಾಗಿದೆ. ಇದು ವಿದ್ಯಾನಗರಿ ಧಾರವಾಡ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಿರುವುದು ಕಳವಳಕಾರಿ ಸಂಗತಿಯಾಗಿದೆ.
ಒಬ್ಬರು ಗುಣಮುಖ : ಧಾರವಾಡದ ನವಲೂರು ಪಠಾಣ ಗಲ್ಲಿಯ ಪಿ-673ನೇ ಸೋಂಕಿತ 26 ವರ್ಷದ ಯುವಕ ( ಮಾವಿನಹಣ್ಣಿನ ಲಾರಿ ಚಾಲಕ) ಮಾವಿನ ಹಣ್ಣು ತೆಗೆದುಕೊಂಡು ಮಹಾರಾಷ್ಟ್ರ, ಮುಂಬೈ ಹೋಗಿಬಂದಿದ್ದ.
ಈತ ಸಂಪೂರ್ಣನಾಗಿ ಕರೋನಾದಿಂದ ಚೇತರಿಸಿಕೊಂಡಿದ್ದಾನೆ. ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 28ಜನ ಕೋವಿಡ್ ನಿಂದ ಗುಣಮುಖರಾಗಿ ಮನೆಯತ್ತ ಹೆಜ್ಜೆ ಹಾಕಿದಂತಾಗಿದೆ.