ರಾಜ್ಯ

ಶಾಲಾ ಶಿಕ್ಷಕರ, ಸರ್ಕಾರಿ ನೌಕರರ ಹಾಗೂ ಪದವೀಧರರ ಹೊಸ ಆಶಾಕಿರಣ ಬಸವರಾಜ ಗುರಿಕಾರ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡ ಜಿಲ್ಲೆಯ ಪ್ರಾಥಮಿಕ ಸರಕಾರಿ ಶಾಲಾ ಶಿಕ್ಷಕರಾಗಿ ಹಲವು ದಶಕಗಳ ಕಾಲ ಸೇವೆಸಲ್ಲಿಸುತ್ತಲೇ ಸಾವಿರಾರು ಶಿಕ್ಷಕರ ಮನಸೊರೆಗೊಳ್ಳುವ ಮೂಲಕ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸಿ ಅದರ ಅಧ್ಯಕ್ಷರಾಗಿದಲ್ಲದೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ನೌಕರರ ಹೊಸ ಆಶಾಕಿರಣವಾಗಿ, ನೇತಾರರಾಗಿ ಹೊರಹೊಮ್ಮಿದ ಕೀರ್ತಿ, ಗೌರವ ಬಸವರಾಜ ಗುರಿಕಾರ ಅವರಿಗೆ ಸಲ್ಲುತ್ತದೆ.

ರಾಜ್ಯಾದ್ಯಂತ ಬಿಡುವಿಲ್ಲದೆ ಓಡಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಅಪಾರ ಶಿಕ್ಷಕರು, ಅಭಿಮಾನಿಗಳು ಹಾಗೂಬಹುದೊಡ್ಡ ಬೆಂಬಲಿಗರ ಪಡೆಯನ್ನೇ ಹೊಂದಿರುವ ಬಸವರಾಜ ಗುರಿಕಾರ ಅವರು ಸರಕಾರಿ ಶಾಲಾ ಶಿಕ್ಷಕರ ಆಪದ್ಬಾಂಧವ ಎಂದೇ ಖ್ಯಾತರಾಗಿದ್ದಾರೆ.

ಅದನ್ನೇ ತಮ್ಮ ಸೇವಾ ನಿವೃತ್ತಿ ಬಳಿಕವೂ ಮುಂದುವರೆಸಿರುವ ಬಸವರಾಜಗುರಿಕಾರಅವರು ಇದೀಗ  ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಒಕ್ಕೂಟದ ಉಪಾಧ್ಯಕ್ಷರಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಇದೀಗ ಕರೋನಾ ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿರುವ ಅವರ ಕೆಲಸ ಕಾರ್ಯಗಳು ಜನರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಜನರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ.

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಜನರಿಗೆ ತಮ್ಮ ಸ್ನೇಹಿತರ ಬಳಗದೊಂದಿಗೆ ನೆರವು ನೀಡುವ ಕೆಲಸ ಮಾಡಿದಲ್ಲದೆ, ಅವರ ಸಂಕಷ್ಟಕ್ಕೆ ಸ್ಪಂದಿಸುವಮೂಲಕ ಜನಾನುರಾಗಿಯಾಗಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಕರೋನಾ ವೈರಸ್  ತಡೆಗಟ್ಟಲು ಸಾಮಾಜಿಕಅಂತರ ಕಾಪಾಡಿಕೊಂಡು ಸ್ಯಾನಿಟೇಸರ್ ಹಾಗೂ ಮಾಸ್ಕ ವಿತರಣೆ ಮಾಡಿದಲ್ಲದೆ, ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಇದರ ಜತೆಗೆ ಬಡ ಕುಟುಂಬಗಳು, ಪೌರ ಕಾರ್ಮಿಕರಿಗೆ ಆಹಾರ ಕಿಟ್, ಮಾಸ್ಕ್, ಸ್ಯಾನಿಟೈಸರ್, ಕೈ ಗವಸು ಸೇರಿ ಇತರ ಅಗತ್ಯ ವಸ್ತುಗಳನ್ನು ವಿತರಿಸಿ ಇತರರಿಗೆ ಮಾದರಿಯಾಗಿದ್ದಾರೆ.

 ಇದಲ್ಲದೆ, ಸಂಕಷ್ಟದಲ್ಲಿರುವ ಶಿಕ್ಷಕರು, ನೌಕರರಿಗೆ ಧೈರ್ಯ ತುಂಬಿ ಅವರ ಜೊತೆಗೆ ನಿರಂತರ ಸಂಪರ್ಕ ಹೊಂದಿ ಅವರಿಗೆ ಆತ್ಮವಿಶ್ವಾಸ ಮೂಡಿಸಿದ್ದಾರೆ. 

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ :

ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನತೆ ಆರೋಗ್ಯ ಕಾಪಾಡಲು ಮೊದಲ ಆದ್ಯತೆ ನೀಡಬೇಕು. ಲಾಕ್ ಡೌನ್ ನಿಂದಾಗಿ ಪದವೀಧರರಿಗೆ ನಿರುದ್ಯೋಗ ಸಮಸ್ಯೆ ಎದುರಾಗಿದೆ.

ಅದಕ್ಕಾಗಿ ಅಗತ್ಯ ಉದ್ಯೋಗ ಸೃಷ್ಟಿಸಲು ಗಮನ ನೀಡಬೇಕು. ಆ ಮೂಲಕ ಅವರ ಆತ್ಮಸ್ಥೆರ್ಯ ತುಂಬಬೇಕು ಎಂದು ಬಸವರಾಜ ಗುರಿಕಾರ ಅವರು  ಮನವಿ ಮಾಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪದವೀಧರ ನಿರುದ್ಯೋಗ ಯುವಕರಿದ್ದಾರೆ. ಸಮೀಕ್ಷೆ ಕಾರ್ಯದಲ್ಲಿ ಸರ್ಕಾರಿ ನೌಕರರನ್ನು ಬಳಸಿಕೊಳ್ಳುವ ಬದಲು ಈ ಯುವಕರನ್ನು ಬಳಸಿಕೊಳ್ಳಬೇಕು.

ಇದರಿಂದ ಸ್ಥಳೀಯ ಮಾನವ ಸಂಪನ್ಮೂಲ ಬಳಕೆ ಜತೆಗೆ ಯುವಕರಿಗೆ ಉದ್ಯೋಗವನ್ನೂ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂಚೆ ಮೂಲಕ ಔಷಧ ರವಾನೆ :

ಗದಗ ಜಿಲ್ಲೆಯ ವ್ಯಕ್ತಿಯೊಬ್ಬರು ಬೇರೆ ಕಡೆಗೆ ಔಷಧ ಸಿಗದೆ ಪರದಾಡುತ್ತಿದ್ದರು. ಅದನ್ನು ಗಮನಿಸಿದ ಬಸವರಾಜ ಗುರಿಕಾರಅವರು ಧಾರವಾಡದ ಪ್ರಮುಖ ಆಸ್ಪತ್ರೆಯಲ್ಲಿ ಮಾತ್ರ ದೊರೆಯುವ ಈ ಔಷಧ ಪಡೆದು ಅದನ್ನು ಗದಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ ಅಂಚೆ ಮೂಲಕ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲಾಡಳಿತಕ್ಕೆ ಅಭಿನಂದನೆ :

ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತಗಳು ಹಗಲಿರುಳು ಶ್ರಮಿಸಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶವನ್ನು ಕಂದಾಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸರಕಾರಿ ನೌಕರರು, ಶಿಕ್ಷಕರು  ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

ಅದಕ್ಕಾಗಿ ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಕರೋನಾ ಸೇನಾನಿಗಳಿಗೆ  ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಬಸವರಾಜ ಗುರಿಕಾರಅವರು ಅಭಿನಂದಿಸಿದ್ದಾರೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *