ಭೋಪಾಲ್ prajakiran.com : ಕೊರೋನಾ ಸೋಂಕಿನ ರೂಪಾಂತರಿ ಡೆಲ್ಟಾ ಪ್ಲಸ್ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ.
ಇಲ್ಲಿನ ಉಜ್ಜಯಿನಿಯ ನಿವಾಸಿಗೆ ಡೆಲ್ಟಾ ಪ್ಲಸ್ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದ್ದ ಪರಿಣಾಮ ಸೋಂಕಿತರು ಗುರುವಾರ ಸಾವನ್ನಪ್ಪಿದ್ದಾರೆ.
ಇದು ದೇಶದ ಹಾಗೂ ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿನಿಂದ ಮೊದಲ ಸಾವಾಗಿದೆ.
ಮಧ್ಯ ಪ್ರದೇಶ ರಾಜ್ಯದಲ್ಲಿ ಇದುವರೆಗೆ ಐದು ಡೆಲ್ಟಾ ಪ್ಲಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೂರು ಪ್ರಕರಣಗಳು ಭೋಪಾಲ್ ನಲ್ಲಿ ಪತ್ತೆಯಾಗಿದ್ದರೆ ಎರಡು ಪ್ರಕರಣಗಳು ಉಜ್ಜಯಿನಿಯಲ್ಲಿ ದೃಢವಾಗಿದೆ.
ಡೆಲ್ಟಾ ಪ್ಲಸ್ ಸೋಂಕಿನಿಂದ ಮೃತಪಟ್ಟ ಮಹಿಳೆಯ ಪತಿಗೆ ಮೊದಲು ಕೋವಿಡ್ ಸೋಂಕು ತಾಗಿರುವುದು ದೃಢವಾಗಿತ್ತು.
ಆ ಬಳಿಕ ಮಹಿಳೆಗೆ ಸೋಂಕು ತಾಗಿದೆ. ಮಹಿಳೆಯ ಪತಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಆದರೆ ಮಹಿಳೆ ಇದುವರೆಗೂ ಒಂದೂ ಡೋಸ್ ಲಸಿಕೆ ಪಡೆದಿಲ್ಲ.
ಈ ಬಗ್ಗೆ ಹೇಳಿಕೆ ನೀಡಿರುವ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಸರ್ಕಾರವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ.
ಡೆಲ್ಟಾ ಪ್ಲಸ್ ಸೋಂಕು ತಾಗಿದ ರೋಗಿಗಳ ಸಂಪರ್ಕಕ್ಕೆ ಬಂದವರನ್ನು ತಪಾಸಣೆ ಮಾಡಲಾಗುತ್ತಿದೆ ಎಂದರು.