ರಾಜ್ಯ

ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಸೈಕಲ್ ಜಾಥಾ

ಧಾರವಾಡ prajaliran.com ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯಿಂದ ಪೆಟ್ರೋಲ್, ಡೀಸೆಲ್,ಅಡಿಗೆ ಅನಿಲ ಹಾಗೂ ಅಡುಗೆ ಎಣ್ಣೆ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿ ಧಾರವಾಡದಲ್ಲಿ ಸೈಕಲ್ ಜಾಥಾ ನಡೆಯಿತು.

ಇದರಿಂದಾಗಿ ಜನಸಾಮಾನ್ಯರ ಬದುಕು ತೀವ್ರ ಅಯೋಮಯಗೊಂಡಿದ್ದು ಸರ್ಕಾರದ ನಡೆಯನ್ನು ಖಂಡಿಸಿದರು.

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಧಾರವಾಡದ ಟೋಲ್ ನಾಕಾ ದಿಂದ ನಗರದ ವಿವಿಧ ಪ್ರದೇಶದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಾಟಗಾರ ಹಾಗೂ ದೀಪಕ ಚಿಂಚೋರೆ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ವಹಿಸಿದ್ದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯಿಂದ ಹಾಗೂ ಪೆಟ್ರೋಲ್, ಡೀಸೆಲ್,ಅಡಿಗೆ ಅನಿಲ,ಹಾಗೂ ಅಡಿಗೆ ಬಳಕೆಯ ಎಣ್ಣೆ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಗಗಣಕ್ಕೇರಿದ ಪರಿಣಾಮವಾಗಿ ಜನಸಾಮಾನ್ಯರ ಬದುಕು ತೀವ್ರ ಅಯೋಮಯಗೊಂಡಿದ್ದು ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತ ಕಾಂಗ್ರೆಸ್ ನ ಆದೇಶದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ನಿರ್ದೇಶನದಂತೆ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ನ ಆಶ್ರಯದಲ್ಲಿ ಹು-ಧಾ ಪಶ್ಚಿಮ-74 ಮತಕ್ಷೇತ್ರದ ರಾಣಿಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಹಾಗೂ ನವನಗರ ಬ್ಲಾಕ್ ಕಾಂಗ್ರೆಸ್ ಗಳ ಜಂಟಿ ಸಹಬಾಗಿತ್ವದಲ್ಲಿ ಧಾರವಾಡ ನಗರದ ಹೃದಯ ಭಾಗದ ಟೋಲ್ ನಾಕಾ ದಿಂದ ಮಾರುಕಟ್ಟೆ ಪ್ರದೇಶದ ತುಂಬೆಲ್ಲ ಸೈಕಲ್ ಜಾಥಾ ನಡೆಸಿ ಪ್ರತಿಭಟನೆ ಕೈಗೊಳ್ಳಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಾಟಗಾರ ಹಾಗೂ ದೀಪಕ ಚಿಂಚೋರೆ ವಹಿಸಿಕೊಂಡಿದ್ದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಮಲಕಾರಿ, ಮುಖಂಡರಾದ, ಅಲಿ ಗೋರವನಕೊಳ್ಳ, ಚಿದಾನಂದ ಸೀಸನಲ್ಲಿ, ಮಂಜುನಾಥ್ ಬಡಕುರಿ, ಪರಶುರಾಮ ಮಾನೆ, ಮಂಜುನಾಥ್ ಮಟ್ಟಿ, ವಸಂತ ಅರ್ಕಾಚಾರಿ, ಶಾಂತಾ ಗುಜ್ಜಳ,ಗೌರಿ ನಾಡಗೌಡ್ರ, ಮುತ್ತು ರಾಯ್ ನಾಯ್ಕರ,ಅಬ್ದುಲ್ ದೇಸಾಯಿ, ಐಎಂ ಜವಳಿ,ಪ್ರಭಾ ಒಡ್ಡಿನ, ನಜೀರ ಬಳಬಟ್ಟಿ, ಅಜಗರ ಮುಲ್ಲಾ, ಮಹೇಶ ಹುಲ್ಲಣ್ಣವರ, ಅಶೋಕ ತುರಾಯಿದಾರ, ಶಂಶುದ್ದೀನ,ಚಂದನ ಸವದಿ, ಮೆಹಬೂಬ್ ಪಠಣ,ಗೌಸ್ ನವಲೂರ, ದೀಪಕ ಪಾಟೀಲ, ಕುಸುಮಾ ಜೈನ,ಶಂಭು ಸಾಲ್ಮನಿ, ಷಣ್ಮುಖ ಬೆಟಗೇರಿ,ಪರಸು ಚುರುಮರಿ, ಹೇಮಂತ ಗುರ್ಲಹೊಸೂರ,ಆನಂದ ಸಿಂಗ್ ನಾಥ, ಸೂರಜ ಗೌಳಿ,ಭೀಮಣ್ಣ ಹೊನಕೇರಿ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *