ರಾಜ್ಯ

ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಹೆಸರಿನಲ್ಲಿ 1.5% ದಷ್ಟು ಲಂಚ : ದಯಾಮರಣ ಕೋರಿ ಪತ್ರ

ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಬಿಜೆಪಿ ಸರ್ಕಾರದ ವಿರುದ್ಧ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ ಅಮರಗೊಳ ತನಗೆ ಬರಬೇಕಾದ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಅಧಿಕಾರಿಗಳು, ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಹೆಸರಿನಲ್ಲಿ 1.5% ದಷ್ಟು ಲಂಚ ಕೇಳುತ್ತಿದ್ದಾರೆ ಎಂದು ರಾಷ್ಟ್ರಪತಿ, ಪ್ರಧಾನಮಂತ್ರಿ, ಹಾಗೂ ರಾಜ್ಯಪಾಲರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

ಈ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಸರ್ಕಾರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಸೋಮವಾರ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಜರುಗಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ತೀವ್ರ ಮುಜುಗುರ ಅನುಭವಿಸಿದ್ದಾರೆ

ಪ್ರತಿಭಟನೆ ನಡೆಯುತ್ತಿದ್ದಂತೆ ಬಿಜೆಪಿಯ ಕೆಲ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ, ಕಮೀಷನ್ ಪೋಸ್ಟರ್ ಹರಿದು ಕೈ ಕಾರ್ಯಕರ್ತರ ನಡುವೆ ನುಗ್ಗಿ
ವಿಜಯೋತ್ಸವ ಆಚರಿಸಿದರು.

ಗುತ್ತಿಗೆದಾರನೊಬ್ಬ ತನಗೆ ಅನ್ಯಾಯ ಆಗಿದೆ ಎಂದು ದಯಾಮರಣ ಅರ್ಜಿ ಸಲ್ಲಿಸಿ ಸಂಕಟ ಪಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಲು ಬಂದವರ ಮೇಲೆ ವಿಜೋಯೋತ್ಸವ ಆಚರಣೆ ಮಾಡಿದ ಬಿಜೆಪಿಯ ನಡೆ ತೀವ್ರ ಖಂಡನಿಯವಾಗಿದೆ.

ನಂತರ ಪರಿಸ್ಥಿತಿಯನ್ನ ತಿಳಿಗೊಳಿಸಿದ ಮುಖಂಡರು ಕೈ ಕಾರ್ಯಕರ್ತರನ್ನು ವಾಪಸ್ಸು ಕಳುಹಿಸಿದ್ದಾರೆ.

ಇನ್ನು ಕಾಂಗ್ರೆಸ್ ನ ಈ ಹೋರಾಟದಲ್ಲಿ ಪ್ರಮುಖ ಸ್ಥಾನದಲ್ಲಿರುವ ನಾಯಕರು ಗೈರಾಗಿದ್ದು ,ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ,ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಯಾಲಿಗಾರ್, ಸಂತೋಷ್ ನಾಯಕ್ ಸೋಮಲಿಂಗ ಯಾಲಿಗಾರ್ ನಾಗಾರ್ಜುನ ಕರ್ತಿಮಲ್ ಸರೋಜಾ ಹೂಗಾರ್.ನಿರ್ಮಲಾ ಮಾನೆ ಭಾಗವಹಿಸಿದ್ದರು.

*ವರದಿ ಕಿರಣಗೌಡ ಉ ತುಪ್ಪದಗೌಡ್ರ ಹುಬ್ಬಳ್ಳಿ*

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *