ರಾಜ್ಯ

ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಮಾಲ್ : ಹತ್ತು ವಾರ್ಡನಲ್ಲಿ ಗೆಲುವು ಸಾಧಿಸುವ ಮೂಲಕ ಹಿಡಿತ ಸಾಧಿಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ prajakiran.com :
ಸಿಎಂ ರೇಸ್ ನಲ್ಲಿದ್ದ ಧಾರವಾಡ ಶಾಸಕ ಅರವಿಂದ ಬೆಲ್ಲದ ಪ್ರತಿನಿಧಿಸುವ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹತ್ತು ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಇಸ್ಮಾಯಿಲ್ ತಮಟಗಾರ ಮತ್ತೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. 

ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇವಲ ಮೂರುವರೆ ಸಾವಿರ ಮತಗಳ ಅಂತರ ಕಾಯ್ದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ಜೊತೆಗೆ ಬಿಜೆಪಿ 13 ವಾರ್ಡ್ ಗೆದ್ದರೆ ಕಾಂಗ್ರೆಸ್ 10 ವಾರ್ಡ್ ತನ್ನ ವಶಕ್ಕೆ ಪಡೆದಿದೆ.
ಆ ಮೂಲಕ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ

ವಾರ್ಡ್ ನಂಬರ್ 10 ಹತ್ತರಿಂದ 34ರ ವರೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 51,495 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿಗಳು 55,003 ಪಡೆದಿದ್ದಾರೆ.

 

ಇದರ ಜೊತೆಗೆ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 4, 6, 7 ರಲ್ಲಿ ಗೆಲುವು ಸಾಧಿಸಲು ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ.

ಅದರಲ್ಲೂ ವಾರ್ಡ್ ನಂ. 4ರಲ್ಲಿ ರಾಜು ಕಮತಿ ಪರ, ವಾರ್ಡ್ ನಂ. 6 ರಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಿದ ಯಾಶೀನ್ ಹಾವೇರಿ ಪೇಟ್ ಪತ್ನಿ ವಿರುದ್ದ ಮೈನು ನಧಾಪ್ ಅವರ ತಾಯಿ ದಿಲ್ ಶಾಧ್ ಬೇಗಂ ಪರ, ವಾರ್ಡ್ ನಂ. 7 ರಲ್ಲಿ ಸಂತೋಷ ನೀರಲಕಟ್ಟಿ ಪತ್ನಿ ದೀಪಾ ನೀರಲಕಟ್ಟಿ ಪರ ಮುಸ್ಲಿಂ ಸಮುದಾಯದ ಮತಗಳನ್ನು ಪಡೆಯುಲು ಟೊಂಕ ಕಟ್ಟಿ ನಿಂತಿದ್ದು ಗುಟ್ಟಾಗಿ ಉಳಿದಿಲ್ಲ.

ಇನ್ನೂ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 14 ರಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಸೇರಿದ್ದ ಸುಭಾಸ ಸಿಂಧೆ ವಿರುದ್ದ ಇಸ್ಮಾಯಿಲ್ ತಮಟಗಾರ ಅವರ ಬೆಂಬಲಿಗ ಶಂಭು ಸಾಲಿಮನಿ ಗೆಲುವು ಸಾಧಿಸಿದ್ದಾರೆ.

ಅದೇ ರೀತಿ ವಾರ್ಡ್ ನಂಬರ್ 16 ರಲ್ಲಿ ಇಸ್ಮಾಯಿಲ್ ತಮಟಗಾರ ಬೆಂಬಲಿಗ ಅಬ್ದುಲ್ ದೇಸಾಯಿ ಅವರ ತಾಯಿ ಪರ್ವಿನ್ ದೇಸಾಯಿ ಗೆಲುವು ಸಾಧಿಸಿದ್ದಾರೆ.

ವಾರ್ಡ್ 17 ರಲ್ಲಿ ಗಣೇಶ ಮುಧೋಳ, ವಾರ್ಡ್ 22ರಲ್ಲಿ ಅಜಗರ್ ಮುಲ್ಲಾ ಪತ್ನಿ ಬಿಲ್ ಕಿಸ್ ಬಾನು ಗೆಲುವಿನ ಪತಾಕೆ ಹಾರಿಸಿದ್ದಾರೆ.

ಅದೇ ರೀತಿ ವಾರ್ಡ್ ನಂ. 23 ರಲ್ಲಿ ಮಂಜುನಾಥ ಬಡಕುರಿ, 24ರಲ್ಲಿ ಡಾ.ಮಯೂರ ಮೊರೆ ಹೀಗೆ ಹಲವಾರು ವಾರ್ಡ್ ನಲ್ಲಿ ಗೆಲುವಿನ ನಗೆ ಬೀರಲು ಇಸ್ಮಾಯಿಲ್ ತಮಟಗಾರ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ‌.

ಒಟ್ಟಾರೆ ಬಿಜೆಪಿ ಶಾಸಕ ಅರವಿಂದ ಬೆಲ್ಲದರ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವಲ್ಲಿ ಇಸ್ಮಾಯಿಲ್ ತಮಟಗಾರ ಜಾಣ ನಡೆ ಕಾರಣ ಅಂದರೆ ತಪ್ಪಾಗಲಾರದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *