ಮಂಗಳೂರು prajakiran.com : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯದ ಮುಂದೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಅದರಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖಿಸಲಾಗಿದೆ.
ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಎಂದು ಆಕೆಯ ಸ್ನೇಹಿತ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಾಯಿಬಿಟ್ಟಿದ್ದಾನೆ ಎಂದು ವಿವರಿಸಲಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಡಾನ್ಸರ್ ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆ ಆಧರಿಸಿ ಪೊಲೀಸರು ಆಂಕರ್ ಅನುಶ್ರೀ ಡ್ರಗ್ಸ್ ಸೇವನೆ ಜೊತೆಗೆ ಸಾಗಾಟ ಕೂಡ ಮಾಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.
ಅನುಶ್ರೀ ಹಲವು ಬಾರಿ ನನ್ನ ಹಾಗೂ ತರುಣ್ ಜೊತೆಗೆ ಸಾಕಷ್ಟು ಬಾರಿ ಡ್ರಗ್ಸ್ ಸೇವನೆ ಮಾಡಿದ್ದಾರೆ.
ಅವರಿಗೆ ಡ್ರಗ್ಸ್ ಪೆಡ್ಲರ್ ಗಳ ಪರಿಚಯ ಕೂಡ ಚೆನ್ನಾಗಿತ್ತು ಎಂದು ಹೇಳಿದ್ದಾನೆ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದಾರೆ.
ಆ ಮೂಲಕ ಆಂಕರ್ ಅನುಶ್ರೀಗೆ ಮತ್ತೊಂದು ಸಂಕಟ ಎದುರಾಗಿದೆ.