ರಾಜ್ಯ

ಧಾರವಾಡದಲ್ಲಿ ಕಾಂಗ್ರೆಸ್ ನಿಂದ ಸಾಂಕೇತಿಕ ಧರಣಿ ಸತ್ಯಾಗ್ರಹ  

ಧಾರವಾಡ prajakiran.com : ಧಾರವಾಡದಲ್ಲಿ ಮಹಾತ್ಮಾಗಾಂಧೀಜಿವರ ಪುಣ್ಯ ಸ್ಮರಣೆಯಂದು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಕಾಂಗ್ರೆಸ್ ಪಕ್ಷದ ವತಿಯಿಂದ ಈ ನೆಲದರೈತರ ಹೋರಾಟ ಬೆಂಬಲಿಸಿ ಹಾಗೂ ಬೆಲೆಯೇರಿಕೆಗಳನ್ನು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ಈ ದೇಶದ ಬೆನ್ನೆಲುಬಾದರೈತರಿಗೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆತಂಕಕಾರಿ ಕಾನೂನುಗಳನ್ನು ಜಾರಿಗೊಳಿಸಿ ಅನ್ಯಾಯ ಮಾಡುತ್ತಿವೆಎಂದು ಆರೋಪಿಸಿದರು.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯನ್ನು ನಿಯಂತ್ರಿಸುವಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲವಾಗಿರುವುದುಎದ್ದುಕಾಣುತ್ತದೆ. ಬಿಜೆಪಿ ಸರಕಾರವು ಪ್ರಜಾಪ್ರಭುತ್ವ ವಿರೋಧಿ ಆಡಳಿತವನ್ನು ನಡೆಸುತ್ತಿದೆಎಂದು ಖಂಡಿಸಿದರು.

ಪ್ರತಿಭಟನೆಯಲ್ಲಿ ಹು-ಧಾ ಮಹಾನಗರಜಿಲ್ಲಾಕಾಂಗ್ರೆಸ್ ಐ ಸಮಿತಿಯಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರಅಧ್ಯಕ್ಷತೆಯಲ್ಲಿ ಸಾಂಕೇತಿಕಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ರಾಬರ್ಟ ದದ್ದಾಪುರಿ, ಆನಂದ ಜಾಧವ, ಸುಭಾಸ ಶಿಂಧೆ, ರಘು ಲಕ್ಕಣ್ಣವರ, ಸದಾನಂದ ಡಂಗನವರ,   ಗೌರಿ ನಾಡಗೌಡ, ಸುರೇಖಾ ಮೇಧಾ, ನಾಗರಾಜ ಗುರಿಕಾರ, ಹೇಮಂತ ಗುರ್ಲಹೊಸೂರ, ಮಂಜುನಾಥ ಭೋವಿ, ಎಚ್.ಎಮ್. ರಾಜು, ಆನಂದ ಮೂಶಣ್ಣವರ, ನವೀದ ಮುಲ್ಲಾ, ಶರಣಪ್ಪಕೊಟಗಿ, ವಸಂತ ಅರ್ಕಾಚಾರಿ, ಬಸವರಾಜ ಮಲಕಾರಿ, ಜಯಂತ ಸಾಗರ, ಚಂದ್ರು ಹುಲ್ಲನ್ನವರ, ಸಾಗರ ಹಿರೇಮನಿ, ಮಹೇಶ ಹುಲ್ಲನ್ನವರ, ಸುಮಿತ್ರಾಜೈನ, ರತ್ನಾ ಮೂಲಿಮನಿ, ಸುಮಿತ್ರಾಕೋಟಕರ, ಕುಸುಮಾಜೈನ, ಪ್ರಕಾಶ ಹಳಿಯಾಳ, ಪೂಜಾ ಹಳಿಯಾಳ, ರಿಯಾಝ ನನ್ನೆಸಾಬನವರ, ಇತರರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *