ರಾಜ್ಯ

ಧಾರವಾಡ : ಎನ್ ಎಸ್ ಎಸ್ ವಿದ್ಯಾರ್ಥಿಗಳ ಜೊತೆಗೂಡಿ ಒಂದೂವರೆ ಟ್ರಾಕ್ಟರ್ ಕಸ ಸ್ವಚ್ಛಗೊಳಿಸಿದ ಬಸವರಾಜ್ ಕೊರವರ

ಧಾರವಾಡದ ಸಂಪಿಗೆ ನಗರದಲ್ಲಿ ಬೃಹತ್ ಸ್ವಚ್ಚತಾ ಕಾರ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಪೋನ್ ಕರೆ ವಿದ್ಯಾರ್ಥಿಗಳು ಪುಲ್ ಖುಷ್

ಧಾರವಾಡprajakiran.com : ಇಲ್ಲಿನ ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಜನಜಾಗೃತಿ ಸಂಘದ ಸಹಯೋಗದೊಂದಿಗೆ ರಾಜ್ಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮೊದಲನೇ ದಿನ ಅರ್ಥಪೂರ್ಣವಾಗಿ ನಡೆಯಿತು.

ಧಾರವಾಡದ ಸಂಪಿಗೆ ನಗರ ಡಬಲ್ ರಸ್ತೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ಅಗಮಿಸಿದ್ದ 160 ಎನ್ ಎಸ್ ಎಸ್ ವಿದ್ಯಾರ್ಥಿಗಳು, ಬಡಾವಣೆಯ ನಿವಾಸಿಗಳು ಸ್ವಚ್ಚತಾ ಕಾರ್ಯ ಕೈಗೊಂಡು ಅಂದಾಜು ಒಂದೂವರೆ ಟ್ರ್ಯಾಕ್ಟರ್ ಕಸ ಸಂಗ್ರಹ ಮಾಡಿದರು.

ಈ ವೇಳೆ ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆ ಆಯುಕ್ತರು ಡಾ.ಗೋಪಾಲಕೃಷ್ಣ ಅವರು ಮೊಬೈಲ್ ಮೂಲಕ ಮಾತನಾಡಿ ವಿದ್ಯಾರ್ಥಿಗಳಿಗೆ ಹಾಗೂ ಬಡಾವಣೆಯ ನಿವಾಸಿಗಳ ಪೌರ ಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ್ ಕೊರವರ ಮಾತನಾಡಿ,
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಜೀವನ ಸುಧಾರಣೆಗೆ ಸಹಕಾರಿಯಾಗಿದ್ದು ಹಾಗೂ ಸಮಾಜದಲ್ಲಿನ ಆಗುಹೋಗುಗಳ ಮೇಲೆ ಬೆಳಕು ಚೆಲ್ಲುತ್ತದೆ.ಅದನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈಗಾಗಲೇ ಜನಜಾಗೃತಿ ಸಂಘ ಐತಿಹಾಸಿಕ ಕೆಲಗೇರಿ ಕೆರೆಯನ್ನು ಸ್ವಚ್ಛಗೊಳಿಸುವ ಮೂಲಕ ಅವಳಿನಗರದ ಜನತೆ ಗಮನ ಸೆಳೆದಿದೆ.

ಆರೋಗ್ಯ, ಶಿಕ್ಷಣದ ಜೊತೆಗೆ ಸಮಾಜಸೇವೆ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯಕ್ಕೆ ಬರದೇ ಇದ್ದದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು.

ಕಸ ತುಂಬಲು ಒಂದು ಟ್ರಾಕ್ಟರ್ ಮಾತ್ರ ಬಂದಿತ್ತು. ಪಾಲಿಕೆಯ ಹಿರಿಯ ಅಧಿಕಾರಿಗಳು ಯಾವುದೇ ಪೋನ್ ಕರೆಗೆ ಸಮಂಜಸ ಉತ್ತರ ನೀಡಲಿಲ್ಲ.

ಇನ್ನಾದರೂ ಮಹಾನಗರ ಪಾಲಿಕೆ ಸ್ವಚ್ಚತಾ ಕಾರ್ಯದಲ್ಲಿ ಸಾರ್ವಜನಿಕರ ಜೊತೆಯಲ್ಲಿ ಕೈಜೋಡಿಸುವ ಕಾರ್ಯವಾಗಲಿ ಎಂದು ಜನ ಜಾಗೃತಿ ಸಂಘದ ಅಧ್ಯಕ್ಷ ಬಸವರಾಜ್ ಕೊರವಾರ ಮನವಿ ಮಾಡಿದರು.

ಬಳಿಕ ಜನಜಾಗೃತಿ ಸಂಘ ದ ವತಿಯಿಂದ 160 ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಹಾಗೂ
ಬಸವರೆಡ್ಡಿ ವಿದ್ಯಾ ಸಂಸ್ಥೆಯ ಶಂಕರ ಬಸವರೆಡ್ಡಿ ವಾಹನ ವ್ಯವಸ್ಥೆ ಮಾಡಿದ್ದರು.

ಬಡಾವಣೆಯ ಹಿರಿಯ ನಾಗರಿಕರು ವಿದ್ಯಾರ್ಥಿಗಳನ್ನು ಅತ್ಯಂತ ಖುಷಿಯಿಂದ ಕರೆದುಕೊಂಡು ಹೋಗಿ ತಮ್ಮ ತಮ್ಮ ಬಡಾವಣೆಯ ಸ್ವಚ್ಚತೆ ಮಾಡಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಸಂತ್ ಎನ್ ದೇಸಾಯಿ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಸುರೇಶಪ್ಪ ಕೆ ಸಜ್ಜನ, ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ ಎನ್ ಎಸ್ ಎಸ್ ಅಧಿಕಾರಿಗಳು ವಸಂತ ಎಸ್ ಐಹೋಳೆ, ಈರಪ್ಪ ಪತ್ತಾರ, ಎನ್.ಎಮ್.ವಾಣಿ ಚನ್ನಸಂದ್ರ, ಬಿರಾದಾರ ಹುಬ್ಬಳ್ಳಿ, ಬಾಬಾಜಾನ್ ದರೂರ,ರಾಘವೇಂದ್ರ ಶೆಟ್ಟಿ, ಮಲ್ಲೇಶ ಅಂಬಿಗೇರ, ಕುಮಾರ ಅಗಸಿಮನಿ, ರಾಮಚಂದ್ರ, ಕೊಡಗ, ಶಿವಾನಂದ ಬಿಳಗಿ, ಬಸವರಾಜ್ ಗಡೇಕರ್, ಪ್ರೋ.ಕೊಟ್ಟರೇಶ ಇನ್ನಿತರರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *