ರಾಜ್ಯ

ಮಹಿಳಾ ನೌಕರರಿಗೆ ಆರು ತಿಂಗಳವರೆಗೆ ಶಿಶುಪಾಲನಾ ರಜೆ ಘೋಷಿಸಿದ ರಾಜ್ಯ ಸರ್ಕಾರ

ಧಾರವಾಡ ಜಿಲ್ಲಾ ನೌಕರರ ಸಂಘದ ವತಿಯಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನೆ

ಧಾರವಾಡ prajakiran.com ಜೂ.22:
2021- 22 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ – 37 ರಲ್ಲಿ ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾ ಅವಧಿಯಲ್ಲಿ ಆರು ತಿಂಗಳದವರೆಗೆ ಅಥವಾ 180 ದಿನಗಳ ಶಿಶುಪಾಲನಾ ರಜೆಯನ್ನು ಘೋಷಿಸಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.

ಮಹಿಳಾ ಸರ್ಕಾರಿ ನೌಕರರಿಗೆ ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ, ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ‌ ಅವಧಿಗೆ ಮಾತ್ರ ರಜೆಯ ಸೌಲಭ್ಯಕ್ಕೆ ಅರ್ಹರಾಗುತ್ತಾರೆ.

ರಜೆಯ ಮೇಲೆ ಹೋಗುವ ನಿಕಟ ಪೂರ್ವದಲ್ಲಿ ಪಡೆಯಲು ಅರ್ಹವಿರುವ ಸಂಪೂರ್ಣ ವೇತನಕ್ಕೆ ಸಮನಾದ ರಜೆ ಸಂಬಳಕ್ಕೆ ಅರ್ಹರಾಗುತ್ತಾರೆ ಮತ್ತು ಪ್ರತಿ ಬಾರಿಯು ಈ ರಜೆ  ಮಂಜೂರಾತಿಯೂ ಕನಿಷ್ಠ 15 ದಿನಗಳಿಗಿಂತ ಕಡೆಮೆ ಇರಬಾರದು.

ರಜೆಯನ್ನು ಸಾಂದರ್ಭಿಕ ರಜೆಯ ಹೊರತಾಗಿ,‌ ನಿಯಮಾನುಸಾರ‌ ರಜೆ  ಪಡೆಯಲು ಅರ್ಹವಿರುವ  ಅಸಾಧಾರಣ ರಜೆಯೂ ಒಳಗೊಂಡಂತೆ ಇತರೆ ರಜೆಯೊಂದಿಗೆ ಸಂಯೋಜಿಸಿ ಪಡೆಯಬಹುದು. ಈ ರಜೆಯನ್ನು ಯಾವುದೇ ರಜೆ ಲೆಕ್ಕದಿಂದ ಕಳೆಯತಕ್ಕದಲ್ಲ.

ಬುದ್ದಿಮಾಂದ್ಯ, ಅಂಗವಿಕಲ ಮಕ್ಕಳನ್ನು ಹೊಂದಿರುವ ಸರ್ಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿರುವ 730 ದಿನಗಳ ಶಿಶುಪಾಲನಾ ರಜೆ ಸೌಲಭ್ಯಕ್ಕೆ ಅರ್ಹರಾದ ನೌಕರಳು ಆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.

ಅದರೊಂದಿಗೆ ಈ ಯೋಜನೆಯಡಿಯಲ್ಲಿ ಸೌಲಭ್ಯಕ್ಕೂ ಅರ್ಹರಾಗುವುದಿಲ್ಲ. ಶಿಶುಪಾಲನಾ ರಜೆಯ ಮಂಜೂರಾತಿಗೆ ಯಾವುದೇ ಪೂರಕ ದಾಖಲೆಗಳನ್ನು ಪಡೆಯುವ ಅವಶ್ಯಕತೆಯಿರುವುದಿಲ್ಲ‌ ಸೇವಾ ಪುಸ್ತಕದಲ್ಲಿ ನಮೂದಿಸಿರುವ ಮಕ್ಕಳ‌‌ ವಿವರಗಳ ಆಧಾರದ ಮೇಲೆ‌‌ ಮಂಜೂರು ಮಾಡತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಸರ್ಕಾರಿ ಮಹಿಳಾ ನೌಕರರಿಗೆ ಸಹಾಯಕವಾಗಲಿದೆ ಎಂದು  ಜಿಲ್ಲಾ  ಸರ್ಕಾರಿ ನೌಕರರ ಅಧ್ಯಕ್ಷ ಎಸ್.ಎಫ್ ಸಿದ್ದನಗೌಡರ ತಿಳಿಸಿದ್ದಾರೆ.

*ಕ್ಯಾನ್ಸರ್ ಪೀಡಿತ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ*: ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರಾಜ್ಯ ಸರ್ಕಾರಿ ನೌಕರರು ಕಿಮೊ, ರೆಡಿಯೋ ಥೆರಪಿ ಚಿಕಿತ್ಸೆ‌‌ ಪಡೆಯುವ ಅವಧಿಯ ದಿನಗಳಿಗೆ  ಸಕ್ಷಮ ವೈಧ್ಯಕೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಒದಗಿಸಿ, ಚಿಕಿತ್ಸೆಯ ಅವಧಿಯಲ್ಲಿ ಗರಿಷ್ಠ ಆರು ತಿಂಗಳ ಮಾತ್ರ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ  ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.

ಆದ್ದರಿಂದ ರಾಜ್ಯ ಸರ್ಕಾರಕ್ಕೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾದ ಎಸ್.ಎಫ್‌ ಸಿದ್ದನಗೌಡರ ಅಭಿನಂದನೆ ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *