ರಾಜ್ಯ

ಧಾರವಾಡ : 358 ನೀರು ಸರಬರಾಜು ನೌಕರರಿಂದ ಸರಕಾರಕ್ಕೆ ರಕ್ತದಲ್ಲಿ ಪತ್ರ ….!

ಧಾರವಾಡ ಜಿಲ್ಲಾಸ್ಪತ್ರೆಯ ಐಸಿಯು ಬೆಡ್ ನಲ್ಲಿಯೇ
5ನೇ ದಿನಕ್ಕೆ ಕಾಲಿಟ್ಟ ಅಮರಣ ಉಪವಾಸ ಸತ್ಯಾಗ್ರಹ

358 ನೀರು ಸರಬರಾಜು ನೌಕರರಿಂದ ಸರಕಾರಕ್ಕೆ ರಕ್ತದಲ್ಲಿ ಪತ್ರ ….!

ಸ್ಪಂದಿಸಬೇಕಾದ ಮಹಾನಗರ ಪಾಲಿಕೆ, ಜಿಲ್ಲೆಯ ಜನಪ್ರತಿನಿಧಿಗಳ ಜಾಣಕುರುಡು

ಧಾರವಾಡ prajakiran.com : 358 ನೀರು ಸರಬರಾಜು ನೌಕರರ ಮರುನೇಮಕ ಹಾಗೂ 7 ತಿಂಗಳ ಸಂಬಳ ಬಿಡುಗಡೆಗೆ ಒತ್ತಾಯಿಸಿ
ಸತತವಾಗಿ 5ನೇ ದಿನವೂ ಧಾರವಾಡ ಜಿಲ್ಲಾ ಆಸ್ಪತ್ರೆಯ ಐಸಿಯು ಬೆಡ್ ನಲ್ಲಿಯೇ ಅಮರಣ ಉಪವಾಸ ಸತ್ಯಾಗ್ರಹವನ್ನು ಜನಜಾಗೃತಿ ಸಂಘ ದ ಅಧ್ಯಕ್ಷ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ ಮುಂದುವರೆಸಿದ್ದಾರೆ.

358 ನೌಕರರ ಬೇಡಿಕೆ ಈಡೇರುವರೆಗೂ ಹೋರಾಟ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಹೋರಾಟಗಾರರಾ್ ಬಸವರಾಜ್ ಕೊರವರ ಹಾಗೂ ನಾಗರಾಜ್ ಕಿರಣಗಿ ಅವರು ನಾಲ್ಕು ದಿನಗಳಿಂದ ಒಂದು ಹನಿ ನೀರು ಸಹ ಕುಡಿಯದ್ದರಿಂದ ಅರೋಗ್ಯ ಸ್ಥಿತಿ ನಿನ್ನೆ ಹದಗೆಟ್ಟಿತ್ತು.

ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ
ಡಾ. ಶಿವಕುಮಾರ ಮಾನಕಾರ, ಡಾ. ಕಿರಣ ಕುಲಕರ್ಣಿ, ಡಾ. ಕವಿತಾ ಹಾಗೂ ಹಲವಾರು ವೈದ್ಯರು, ಪೊಲೀಸರು, ಹುಬ್ಬಳ್ಳಿ ಧಾರವಾಡ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನೀರು ಸರಬರಾಜು ನೌಕರರು ಹಾಗೂ
ಆರೋಗ್ಯ ಪರಿಶೀಲಿಸಲಾಗಿ,ಇಂದು ವಿಶೇಷವಾಗಿ ಕುಟುಂಬದ ಸದಸ್ಯರು, ಮಕ್ಕಳ ಒತ್ತಡಕ್ಕೆ ಮಣಿದು ದ್ರವ ವಸ್ತುವನ್ನಾದರೂ ಸ್ವೀಕರಿಸದಿದ್ದರೆ ಆರೋಗ್ಯ ತುಂಬಾ ಕೆಟ್ಟ ಪರಿಸ್ಥಿತಿಯನ್ನು ತಲುಪಿದೆ ಎಂದು ಮನವೊಲಿಸಿದ ನಂತರ ನೀರು ಕುಡಿದರು.

ಐದನೇ ದಿನ ವಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಸಮಸ್ಯೆಯ ತೀವ್ರತೆಯನ್ನು ತಿಳಿದುಕೊಂಡು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನಲೆಯಲ್ಲಿ ನೌಕರರು ರಕ್ತದಲ್ಲಿ ಪತ್ರ ಬರೆದು ಸರಕಾರಕ್ಕೆ ಕಳುಹಿಸಿದರು.

ಇದೇ ವೇಳೆಗೆ ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಜನರು ಕೂಡ ಹೋರಾಟಕ್ಕೆ ಪಕ್ಷ ಭೇದ ಮರೆತು ಸಂಪೂರ್ಣ ಬೆಂಬಲ ನೀಡಿ ಜನವಿರೋಧಿ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಈಗಲಾದರೂ ಸಂಬಂಧಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸುವರೆ ಕಾದುನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *