ರಾಜ್ಯ

ಬಿಜೆಪಿಯಿಂದ ಜ್ಞಾನವರ್ಧನೆಗೆ ‘ಪುಸ್ತಕ ಓದು’ ಅಭಿಯಾನ ; ಜಾಲತಾಣದಲ್ಲಿ ಫೋಟೋ ವೈರಲ್

ಮಂಜುನಾಥ ಎಸ್.ರಾಠೋಡ

ಗದಗ prajakiran.com : ಫೇಸ್ಬುಕ್ನಲ್ಲಿ ಕಳೆದೈದು ದಿನಗಳಿಂದ ಪುಸ್ತಕ ಓದುವ ಚಾಲೆಂಜ್ಟ್ರೆಂಡ್ಶುರುವಾಗಿದೆ

ಫೇಸ್ಬುಕ್ನಲ್ಲಿ ಕೆಲ ದಿನಗಳಿಂದಕಪಲ್ ಚಾಲೆಂಜ್‘, ‘ಕೆಸರಿ ಚಾಲೆಂಜ್‘, ‘ಸಿಂಗಲ್ ಚಾಲೆಂಜ್ಜನಪ್ರಿಯವಾಗಿದ್ದು ಗೊತ್ತಿರಬಹುದು.

ಹೀಗೆ ಒಂದಲ್ಲ ಒಂದು ಅಭಿಯಾನ ಸಕ್ರಿಯವಾಗಿರುವ ದಿನಗಳಲ್ಲಿ  ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟೀಕರಣ ಮತ್ತು ವಿದ್ಯಾರ್ಥಿಗಳಲ್ಲಿ  ತಿಳಿವಳಿಕೆ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷಪುಸ್ತಕ ಓದುವ ಚಾಲೆಂಜ್ಎನ್ನುವ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ.

ಜಗತ್ತಿನಲ್ಲಿ ಪ್ರತಿಯೊಬ್ಬರು ಓದುವುದನ್ನು ರೂಡಿಸಿಕೊಳ್ಳಬೇಕು. ಅದಕ್ಕಾಗಿ ಜನರಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸುವ ದೇಶದ ಸಾಂಸ್ಕೃತಿಕ ಪರಂಪರೆ ಸಾಹಿತಗಳ ಬಗ್ಗೆ ಅರಿವು ಮೂಡಿಸಿ ಅವರ ಕೃತಿಗಳನ್ನು ಎಲ್ಲರಿಗೂ ಪರಿಚಯಿಸುವ ಸಲುವಾಗಿ ಬಿಜೆಪಿ ದೇಶಾದ್ಯಂತ ಪುಸ್ತಕ ಓದುವ ಅಭಿಯಾನ ಆಯೋಜಿಸಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಹಾಗೂ ರಾಜ್ಯ, ರಾಷ್ಟ್ರ  ಮಟ್ಟದ ಬಿಜೆಪಿ ನಾಯಕರುಪುಸ್ತಕ ಓದುವಫೋಟೋ ಈಗ ಎಲ್ಲೆಡೆ ವೈರಲ್ ಆಗಿವೆ

ಹೊಸ ಟ್ರೆಂಡ್ನಿಂದ ಪುಸ್ತಕ ಓದುವ ಚಾಲೆಂಜ್ ಜನಪ್ರಿಯವಾಗಯತ್ತಿದೆ. ದೈಹಿಕ ದೃಢತೆಯೊಂದಿಗೆ ಜ್ಞಾನ ಸಂಪನ್ನರಾಗುವುದು ಕೂಡ ಅಗತ್ಯ ಎನ್ನುವ ಉದ್ದೇಶದಿಂದ ಬಿಜೆಪಿಯಿಂದ ಸವಾಲನ್ನು ಆರಂಭಿಸಲಾಗಿದೆ.

 ಅಭಿಯಾನದ ಮೂಲ ಉದ್ದೇಶ ಪುಸ್ತಗಳನ್ನು ಓದುವಂತೆ ಜನರನ್ನು ಪ್ರೇರೇಪಿಸುವುದು, ಭಾರತ ಎಂದರೆ ಸಂಸ್ಕೃತಿಯ ಕಣಜ ಅದು ಈಗಿನ ಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ.

ಸಾಂಸ್ಕೃತಿಕ ಪರಂಪರೆಯನ್ನು ಜೊತೆ ಜೊತೆ ಭಾರತದ ಅತ್ಯುತ್ತಮ ಲೇಖಕರನ್ನು ಜನರಿಗೆ ಅವರ ಪುಸ್ತಕಗಳ ಮೂಲಕ ಪರಿಚಯಿಸುವುದು.

ಹಿನ್ನೆಲೆ ಗದಗ ಜಿಲ್ಲಾ ಬಿಜೆಪಿ ಪಕ್ಷದ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿ, ಬಿಜೆಪಿ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಸಹ ಪ್ರಭಾರಿ ನಾರಾಯಣ ಜರ್ತಘರ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ಓದುತ್ತಿರುವಮುಚ್ಚಿಟ ದಲಿತ ಚರಿತ್ರೆಪುಸ್ತಕ ಓದುವುದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 ಈಗ ದೇಶದಲ್ಲಿ ಸಾಕಷ್ಟು ದೊಡ್ಡ ಪುಸ್ತಕ ಮಳಿಗೆಗಳು ಇದ್ದರೂ ಅವು ಕೇವಲ ಪಠ್ಯಪುಸ್ತಕ ಮಾರಾಟ ಕೇಂದ್ರಗಳಾಗಿವೆಯೇ ವಿನಾ ಅಲ್ಲಿ ಸಾಹಿತ್ಯಿಕ ಪುಸ್ತಕಗಳು ದೊರೆಯುವುದ ತೀರಾ ಕಡಿಮೆ.

ಇನ್ನು ವರ್ಷಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ನಡೆಯುವ ಸಾಹಿತ್ಯ ಉತ್ಸವ, ಪುಸ್ತಕ ಮೇಳಗಳು ಸಂಪೂರ್ಣವಾಗಿ ವಾಣಿಜ್ಯ ರೂಪ ತಾಳಿದ್ದು, ಹೊಸ ಓದುಗರನ್ನು ಆಕರ್ಷಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ.

ಎಲ್ಲಾ ಕಾರಣಗಳಿಗಾಗಿ ಜನರಲ್ಲಿ ಅದರಲ್ಲೂ ಯುವ ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಉದ್ದೇಶದಿಂದ ಅಭಿಯಾನ ಬಿಜೆಪಿ ಯಿಂದ  ನಡೆಸಲಾಗುತ್ತಿದೆ.

ಅಭಿಯಾನದಿಂದಾಗಿ ಯುವಕರು ಹೆಚ್ಚು ಓದಿಕೊಳ್ಳುತ್ತಾರೆ. ಹೆಚ್ಚೆಚ್ಚು ಓದಿಕೊಂಡಷ್ಟು ಪ್ರಶ್ನೆ ಮಾಡುವ ಮತ್ತು ವಿವೇಚಿಸುವ ಸಾಮರ್ಥ್ಯ ಬೆಳೆಯುತ್ತದೆ ಇದರಿಂದ ಭ್ರಷ್ಟಚಾರದಂತಹ ಕೃತ್ಯಗಳು ಕಡಿಮೆ ಆಗುತ್ತವೆ ಎನ್ನುವುದು ಒಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಗದಗ ಜಿಲ್ಲಾ ಬಿಜೆಪಿ ಪಕ್ಷದ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿಯವರು.

ನಮ್ಮ ನಿತ್ಯ ಜೀವನದಲ್ಲಿ ಪುಸ್ತಕ ಪ್ರೀತಿ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಮಾನಸಿಕ ದುಗುಡ, ಯಾತನೆಗಳೆಲ್ಲ ದೂರವಾಗಿ ನಿರುಮ್ಮಳರಾಗುತ್ತೇವೆ ಜ್ಞಾನವರ್ಧನೆಯಾಗ ಬೇಕಾದರೆ ಪುಸ್ತಕ ಓದಲೇಬೇಕು. ನಿಟ್ಟಿನಲ್ಲಿ ಪುಸ್ತಕ ಚಾಲೆಂಜ್ಪೂರಕ

 ಲಿಂಗರಾಜ ಪಾಟೀಲ, ಬಿಜೆಪಿ ಪಕ್ಷದ ವಿಭಾಗ ಪ್ರಭಾರಿ .

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *