ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ 4, 6, 22 ಕಾಂಗ್ರೆಸ್, 25 ಜೆಡಿಎಸ್, 5, 8, 9, 13 ರಲ್ಲಿ ಬಿಜೆಪಿ ಗೆಲುವು

ಹುಬ್ಬಳ್ಳಿ-ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ 4 ಕಾಂಗ್ರೆಸ್, ,ವಾರ್ಡ 25 ಜೆಡಿಎಸ್ ವಾರ್ಡ 8 ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ‌.

ವಾರ್ಡ್ ನಂಬರ್ 4 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಕಮತಿ 3123 ಮತಗಳನ್ನು ಪಡೆದು ಜಯಗಳಿಸಿದ್ದಾರೆ

ಬಿಜೆಪಿ ಅಭ್ಯರ್ಥಿ ಬಸವರಾಜ ಪಳೋಟಿ 2274,
ಜೆಡಿಎಸ್ ಅಭ್ಯರ್ಥಿ ಮುಸ್ತಾಕ ಅಹ್ಮದ ಶೇತಸನದಿ 619, ಎಎಪಿ ಅಭ್ಯರ್ಥಿ ಮಲ್ಲಿಕಾರ್ಜುನ ಶಲವಡಿ 54 ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಸೀಫ್ ಎಚ್ ನದಾಪ 33, ಪ್ರವೀಣ ಪಾಟೀಲ 27, ರಾಕೇಶ ದೊಡ್ಡಮನಿ 229 ಹಾಗೂ ರಾಜಶೇಕರಯ್ಯ ವಿ. ಕಂತಿಮಠ 51 ಮತಗಳನ್ನು ಪಡೆದಿದ್ದಾರೆ.
ನೋಟಾ 56 ಮತಗಳು ಮತ್ತು 07 ತಿರಸ್ಕೃತ ಮತಗಳು ಸೇರಿ ಒಟ್ಟು 6466 ಮತಗಳು ಚಲಾವಣೆಯಗಿವೆ.

ವಾರ್ಡ್ ನಂಬರ್ 8 ರಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಶೇಳಕೆ 2114 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 1518 ಮತಗಳನ್ನು ,ಜೆಡಿಎಸ್ ಅಭ್ಯರ್ಥಿ ಬಸವರಾಜ ಕುರಟ್ಟಿಮಠ 97 ಮತಗಳನ್ನು ಪಕ್ಷೇತರ ಅಭ್ಯರ್ಥಿ ಮಹಾಂತೇಶ್ ಕೊಡ್ಲಣ್ಣವರ 39 ಮತಗಳನ್ನು, ಎಎಪಿ ಅಭ್ಯರ್ಥಿ ಶರೀಫಸಾಬ ಮಡಕೇಶ್ವರ 52 ಮತಗಳನ್ನು, ಪಕ್ಷೇತರ ಅಭ್ಯರ್ಥಿಪ್ರಕಾಶ ಬಾಬುರಾವ್ ಘಾಟಿಗೆ 1938 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಪ್ರಮೋದ ಚಿದಂಬರ ಹಂದಿಗೋಳ 51 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಭರತ ವಿಶ್ವಾಸರಾವ್ ಸಾವಂತ 77 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಮಂಜುನಾಥ ಕದಂ 238 ಮತಗಳನ್ನು, ಪಕ್ಷೇತರ ಅಭ್ಯರ್ಥಿ ರವಿಕುಮಾರ ನೀಲಕಂಠಪ್ಪ ಹೆಗಡಿ 85 ಮತಗಳನ್ನು, ಹಾಗೂ ಪಕ್ಷೇತರ ಅಭ್ಯರ್ಥಿ ಶಕುಂತಲಾ ಕೇಶವ ಕಟ್ಟಿ 43 ಮತಗಳನ್ನು ಪಡೆದಿದ್ದಾರೆ. ನೋಟಾ 51ಮತಗಳು ಸೇರಿ ಒಟ್ಟು 6301 ಮತಗಳು ಚಲಾವಣೆಯಗಿವೆ. 6250 ಮತಗಳು ಸಿಂಧು ಆಗಿವೆ.

ವಾರ್ಡ್ ನಂಬರ್ 6 ರಲ್ಲಿ
ಕಾಂಗ್ರೇಸ್ ಅಭ್ಯರ್ಥಿ ದಿಲಷಾದ ಬೇಗಂ ನಧಾಫ 2737 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 2539 ಮತಗಳನ್ನು, ಪಕ್ಷೇತರ ಅಭ್ಯರ್ಥಿಗಳಾದ ಶಾಹೀನ ಹಾವೇರಿಪೇಟ
1261 ಮತ್ತು ಯಲ್ಲಮ್ಮ ಕಡೇಮನಿ 241 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ 161 ಮತಗಳನ್ನು ಪಡೆದಿದ್ದಾರೆ. 59 ನೋಟಾ ಅಭ್ಯರ್ಥಿಗಳು ಸೇರಿ ಒಟ್ಟು 6998 ಮತಗಳು ಚಲಾವಣೆಯಾಗಿದ್ದು, 6939 ಮತಗಳು ಸಿಂಧುವಾಗಿವೆ.

ವಾರ್ಡ್ ನಂಬರ್ 22 ರಲ್ಲಿ ಕಾಂಗ್ರಸ್ ಅಭ್ಯರ್ಥಿ ಮುಲ್ಲಾ ಬಿಲಕಿಸ ಬಾನು 2265 ಮತಗಳಿಂದ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿತ್ತಲಮನಿ ಪಾರ್ವತಿ ಚಂದ್ರಶೇಖರ 1027, ಜೆಡಿಎಸ್ ಅಭ್ಯರ್ಥಿ ರಶೀದಾ ಮಹ್ಮಮದ್ ರಫೀಕ ಕಿರಶಾಳ 515, ಆಪ್ ಪಕ್ಷದ ಅಭ್ಯರ್ಥಿ ಮುಮೇಜಾಬೇಗಂ ಗುತ್ತಲ 107, ಪಕ್ಷೇತರ ಅಭ್ಯರ್ಥಿಗಳಾದ ಅಫ್ರೀನ ಜೆ ಅದೋನಿ 219, ನಮ್ರತಾ ಮಿಶ್ರಾ ನಂದೂರ 42, ಮಮತಾಜ ಬಾಕ್ಷರಸಾಬ ಬಳ್ಳಾರಿ 141, ಮಾಧುರಿ ಇರಾಣಿ 41, ವಹಿದಾ ದಿವಾನ ಬಳ್ಳಾರಿ 52 ಮತಗಳನ್ನು ಪಡೆದಿದ್ದಾರೆ. ನೋಟಾ 36 ಸೇರಿ 4445 ಮತಗಳು ಚಲಾವಣೆಯಾಗಿವೆ.

ವಾರ್ಡ್ ನಂಬರ್ 13 ರಲ್ಲಿ
ಬಿಜೆಪಿ ಅಭ್ಯರ್ಥಿ ಬೇದರೆ ಸುರೇಶ ಫಕ್ಕೀರಪ್ಪ 1945 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಂಬೋರೆ ರಾಜು ಶಂಕರರಾವ 1604 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಮಜೀದಖಾನ ರುಸ್ತುಂಖಾನ ಕಿತ್ತೂರ
767 ಮತಗಳು, ಕಾಂಗ್ರೇಸ್ ಅಭ್ಯರ್ಥಿ ಹೇಮಂತ ಬಾಬು ಗುರ್ಲಹೊಸೂರ 721 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ ಜಮೀರ ಹುಸೇನ ಶಾಬುದ್ದಿನ ಮುಕ್ತಿ 19 ಮತಗಳನ್ನು ಪಡೆದಿದ್ದಾರೆ. 60 ನೋಟಾ ಅಭ್ಯರ್ಥಿಗಳು ಸೇರಿ ಒಟ್ಟು 5116 ಮತಗಳು ಚಲಾವಣೆಯಾಗಿದ್ದು, 5056 ಮತಗಳು ಸಿಂಧುವಾಗಿವೆ.

ವಾರ್ಡ್ ನಂಬರ್ 23 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಡಕುರ್ಕಿ ಮಂಜುನಾಥ 2431 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಂಜಯ ಕಪಟಕರ 2139,
ಪಕ್ಷೇತರ ಅಭ್ಯರ್ಥಿಗಳಾದ ಚಂದ್ರಶೇಖರ ರಾಯರ 209 , ಪರಶುರಾಮ್ ಮಾನೆ  86 ಮತಗಳನ್ನು ಪಡೆದಿದ್ದಾರೆ. ನೋಟಾ 66 ಮತಗಳು  ಸೇರಿ ಒಟ್ಟು 4865 ಮತಗಳು ಚಲಾವಣೆಯಗಿವೆ. ವಾರ್ಡ್ ನಂಬರ್ 9 ರಲ್ಲಿ ಬಿಜೆಪಿ ಅಭ್ಯರ್ಥಿ ನಾಝರೆ ರತ್ನಬಾಯು ಏಕನಾಥ 1488 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಸುನೀತಾ ಆ ಅಂಕೋಲೆಕರ 1467, ಜೆಡಿಎಸ್ ಅಭ್ಯರ್ಥಿ ಮೇಘದರ್ಶಿನಿ ಈಶ್ವರ ಸಾಣಿಕೊಪ್ಪ 522 ಮತಗಳನ್ನು ಪಡೆದಿದ್ದಾರೆ‌. ಪಕ್ಷೇತರ ಅಭ್ಯರ್ಥಿಗಳಾದ ಆರತಿ ಮಹೇಶ ಬೆಳಗಾಂವಕರ 327, ಸವಿತಾ ಬಸವರಾಜ ಕಟಗಿ 765, ಜ್ಯೋತಿ ಮೋಹನ ಮೇಲಿನಮನಿ 381, ನಾಗಮ್ಮ ವಿಜಯ ಕುಂದಗೋಳ 88, ಶಾಂತವ್ವ ಬಸಪ್ಪ ಬೂದಿಹಾಳ 146 ಮತಗಳನ್ನು ಪಡೆದಿದ್ದಾರೆ. 62 ನೋಟಾ ಸೇರಿ ಒಟ್ಟು 5246 ಚಲಾಯಿಸಲ್ಪಟ್ಟಿವೆ.
ವಾರ್ಡ್ ನಂಬರ್ 5 ರಲ್ಲಿ* ಬಿಜೆಪಿ ಅಭ್ಯರ್ಥಿ ನಿತಿನ ಇಂಡಿ 2477 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿಠ್ಠಲ ಚವ್ಹಾನ 343 ಮತಗಳನ್ನು , ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚನ್ನಗೌಡರ 1424 ಮತಗಳನ್ನು ಪಕ್ಷೇತರ ಅಭ್ಯರ್ಥಿ ಗಿರೀಶ ಸದಾಶಿವ ಗೋಡಿ 43 ಮತಗಳನ್ನು, ಎಎಪಿ ಅಭ್ಯರ್ಥಿ ನಜಿರ ಅಹಮ್ಮದ ಕುಂದಗೋಳ 34 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಭೀಮಪ್ಪ ರೆಡ್ಡಿ 17 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಸುರಜ ಮಲ್ಲಿಕಾರ್ಜುನ ಪುಡಕಲಕಟ್ಟಿ 1311 ಮತಗಳನ್ನು ಪಡೆದಿದ್ದಾರೆ. ನೋಟಾ 57 ಮತಗಳು ಸೇರಿ ಒಟ್ಟು 5763 ಮತಗಳು ಚಲಾವಣೆಯಗಿವೆ. 5706 ಮತಗಳು ಸಿಂಧು ಆಗಿವೆ.
ವಾರ್ಡ್ ನಂಬರ್ 24 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೊರೆ 1953 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಡವಣ್ಣನವರ ಶಿವಪ್ಪ 913,
ಪಕ್ಷೇತರ ಅಭ್ಯರ್ಥಿಗಳಾದ ಸಂತೋಷ ನಂದೂರ 27, ಚಿದಾನಂದ ಸಿದ್ಧಾರೂಡ ಶಿಸನಳ್ಳಿ 575, ಪರಶುರಾಮ್ ಮಾನೆ 356, ಮಹಾವೀರ ಶಿವಣ್ಣನರ 760, ಮಂಜುನಾಥ ಕಲ್ಲಪ್ಪ ಅಂಗಡಿ 348, ಮಂಜುನಾಥ ಕುಸಗಲ್ 311 ಮತಗಳನ್ನು ಪಡೆದಿದ್ದಾರೆ. ನೋಟಾ 65 ಮತಗಳು  ಸೇರಿ ಒಟ್ಟು 5243 ಮತಗಳು ಚಲಾವಣೆಯಗಿವೆ.
ವಾರ್ಡ್ ನಂಬರ್ 25* ರಲ್ಲಿ ಜೆಡಿಎಸ್ ಅಭ್ಯರ್ಥಿ ಲಕ್ಷ್ಮೀ ಮಾರುತಿ ಹಿಂಡಸಗೇರಿ 1678 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಆತ್ಮಾನಂದ ತಳವಾರ 1306, ಬಿಜೆಪಿ ಅಭ್ಯರ್ಥಿ ಮಂಜುಳಾ ಪರಶುರಾಮ್ ಸಾಕರೆ 882, ಪಕ್ಷೇತರ ಅಭ್ಯರ್ಥಿಗಳಾದ ಪಾರ್ವತಿ ಯಲ್ಲಪ್ಪಾ ಸುರಪುರ 29, ಸ್ಮಿತಾ ಆನಂದ ಜಾಧವ 1116 ಮತಗಳನ್ನು ಪಡೆದಿದ್ದಾರೆ. ನೋಟಾ 52 ಮತಗಳು  ಸೇರಿ ಒಟ್ಟು 5011 ಮತಗಳು ಚಲಾವಣೆಯಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *