ಆರೋಗ್ಯ

ಸೋಂಟ ನೋವಿಗೆ ಇಲ್ಲಿದೆ ಮನೆ ಮದ್ದು

  • ಹಸಿ ಆಲೂಗಡ್ಡೆ ಹಾಗೂ ಬಿಲ್ವಪತ್ರೆಯ ತಿರುಳು ಇವೆರಡನ್ನು ಅರೆದು ಮಿಶ್ರಣವನ್ನು ಸೋಂಟಕ್ಕೆ ಲೇಪಿಸಿ ಪಟ್ಟ ಹಾಕುವುದರಿಂದ ಸೋಂಟು ನೋವು ಕಡಿಮೆಯಾಗುವುದು.
  • ಮೆಂತ್ಯೆ ಸೊಪ್ಪಿನ ಪಲ್ಯ ಮಾಡುವಾಗ ಅದರಲ್ಲಿ ಎರಡು ಬಿಲ್ವಪತ್ರೆ ದಳಗಳನ್ನು ಹಾಕಬೇಕು. ಈ ಪಲ್ಯವನ್ನು ನಿಯಮಿತವಾಗಿ ಒಂದು ವಾರ ಸೇವಿಸುವುದರಿಂದ ಸೋಂಟ ನೋವು ದೂರವಾಗುವುದು.
  • ಅರ್ಧ ಚಮಚ ಹಿಪ್ಪೆಲಿಯಾ ಚೂರ್ಣ ಸೇವಿಸಿ ಮೇಲೆ ಒಂದು ಕಪ್ ಬಿಸಿಯಾದ ಗಜ್ಜರಿಯ ರಸವನ್ನು ಸೇವಿಸಬೇಕು.
  • ಹಸಿ ಗಜರಿಯ ರಸದಲ್ಲಿ ಸ್ವಲ್ಪ ಲವಂಗದ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ ಅದನ್ನು ಸೋಂಟಕ್ಕೆ ಲೇಪಿಸಿ ನಿತ್ಯ ಎರಡರಿಂದ ಮೂರು ಭಾರಿ ನಿಧಾನವಾಗಿ ಮಾಲಿಶ್ ಮಾಡಬೇಕು.
  • ಒಂದು ಚಮಚ ಮೆಂತ್ಯೆಯ ಬೀಜದ ಚೂರ್ಣವನ್ನು ಒಂದು ಗ್ಲಾಸ್ ಏಳೆ ನೀರಿನ ಜೊತೆಗೆ ಕೆಲವು ದಿನ ನಿತ್ಯ ನಿಯಮಿತವಾಗಿ ಸೇವಿಸಬೇಕು.
  • ಒಂದು ಚಮಚ ಹಸಿ ಶುಂಠಿ ರಸದಲ್ಲಿ ಒಂದು ಚಿಟಿಕೆ ಹಿಪ್ಪಳ್ಳಿ ಚೂರ್ಣ ಸೇರಿಸಿ ದಿನದಲ್ಲಿ ಎರಡು ಭಾರಿ ಸೇವಿಸಬೇಕು.
  • 250 ಗ್ರಾಂ ಸಾಸಿವೆ ಎಣ್ಣೆಯಲ್ಲಿ ಐದು ಗ್ರಾಂ ಇಂಗು ಹಾಗೂ ಒಂದು ತುಂಡು ಕರ್ಪೂರ ಸೇರಿಸಿ ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಈ ಎಣ್ಣಿಯನ್ನು ಸೋಂಟಕ್ಕೆ ಲೇಪಿಸಬೇಕು.
  • ವಟವೃಕ್ಷದ ಬೇರನ್ನು ಚೂರ್ಣ ಮಾಡಿ ಸಾಸಿವೆ ಎಣ್ಣೆಯಲ್ಲಿ ಕುದಿಸಬೇಕು. ಈ ಎಣ್ಣೆಯನ್ನು ಸೋಂಟಕ್ಕೆ ಲೇಪಿಸಿ ಮಲಗಬೇಕು. ಮುಂಜಾನೆ ಬಿಸಿ ನೀರು ಹಾಕಿಕೊಳ್ಳಬೇಕು.

ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *