ರಾಜ್ಯ

ರೈತ ನಾಯಕ ಬಾಬಾಗೌಡ ಪಾಟೀಲರಿಗೆ ರಾಜ್ಯ ಸರಕಾರದಿಂದ ಅಪಮಾನ : ನೀರಲಕೇರಿ ಕಿಡಿ

ಧಾರವಾಡ prajakiran.com : ಅಪ್ರತಿಮ ರೈತ ಹೋರಾಟಗಾರ ರೈತರ ಧ್ವನಿಯಾಗಿದ್ದ ಕೇಂದ್ರ ಮಾಜಿ ಸಚಿವರು, ಎರಡು ಕಡೆ ಏಕಕಾಲಕ್ಕೆ ಶಾಸಕರಾಗಿದ್ದ ಬಾಬಾಗೌಡ ಪಾಟೀಲ ಅವರಿಗೆ ರಾಜ್ಯದ ಬಿಜೆಪಿ ಸರ್ಕಾರ ಅಪಮಾನ ಮಾಡಿದೆ.

ಸಕಲ ಸರಕಾರಿ  ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸದಿರುವುದು ನೋವಿನ ಸಂಗತಿ ಎಂದು ಹೈಕೋರ್ಟ್ ವಕೀಲ ಹಾಗೂ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಕಣ್ಣೀರು ಹಾಕಿದರು.

ಅವರಿಗೆ ಧಾರವಾಡ ನರೇಂದ್ರ ಬೈ ಪಾಸ್ ಬಳಿ ಹಮ್ಮಿಕೊಂಡ ನುಡಿ ನಮನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿ  ಬಾವುಕರಾದರು.

ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮನಗೌಡರು ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನಮಗೆ ಅಗತ್ಯ ಸಹಕಾರ ನೀಡಿ, ಸೌಜನ್ಯ ಮೆರೆದರು. ಸರಕಾರದ ನಡೆ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ

ಅಖಂಡ ಕರ್ನಾಟಕ ರೈತ ಸಂಘ ಮತ್ತು ಶ್ರೀ ಬಾಬಾಗೌಡ ಪಾಟೀಲರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಬಾಬಾಗೌಡ ಪಾಟೀಲರಿಗೆ ನುಡಿ ನಮನ ಕಾರ್ಯಕ್ರಮ ದಲ್ಲಿ ಅಭಿಮಾನಿಗಳಿಂದ ಗೌರವ ನಮನ ಸಲ್ಲಿಸಿ, ತಮ್ಮ ಒಡನಾಟ ಹಂಚಿಕೊಂಡರು.

ಬಾಬಾಗೌಡ ಪಾಟೀಲ್ ಅವರು ಮಾಜಿ ಕೇಂದ್ರ ಸಚಿವರಾಗಿದ್ದರು ಸರಳ ಜೀವನ ನಡೆಸುವ ಮೂಲಕ ಮಾದರಿಯಾಗಿದ್ದಾರೆ.

ಸುದೀರ್ಘ 40 ವರ್ಷಗಳ ಕಾಲ ರೈತರ ಗಟ್ಡಿಧ್ವನಿಯಾಗಿದ್ದರು. ಅವರು ಧಾರವಾಡ ನೆಲದಲ್ಲಿ ಹಲವು ರೈತ ಹೋರಾಟಗಳಿಗೆ ಸಾಕ್ಷಿಯಾಗಿದ್ದರು.

ಬಾಬಾಗೌಡರ ಸದಾಕಾಲವೂ ನಮ್ಮ ಜೊತೆಗೆ ಇರಲಿದ್ದಾರೆ. ಅವರ ಚಿಂತನೆ, ಆದರ್ಶಗಳನ್ನು ಅನುಸರಿಸಿ ಮುಂದಿನ ದಿನಗಳಲ್ಲಿ ಚಿಂತನ‌-ಮಂಥನ ಮಾಡೋಣ, ರೈತರಿಗಾಗಿ ಒಂದಾಗಿ ಹೋರಾಟದ ಹಾದಿ ಹಿಡಿಯೋಣ ಎಂದು ಹೇಳಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ,
ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ವಾಲಿ, ಶಿವಾನಂದ ಹೊಳೆಹಡಗಲಿ, ಶಿವಾನಂದ ಅಂಬಡಗಟ್ಟಿ, ಮಹಾಂತೇಶ ರಾವುತ, ದಯಾನಂದ ಪಾಟೀಲ, ಬಿ.ಸಿ.ಪಾಟೀಲ, ಈಶಪ್ರಭು ಪಾಟೀಲ, ಗುರುರಾಜ ಹುಣಸಿಮರದ, ಕೇಶವ ಯಾದವ, ಅಪ್ಪೇಶ ದಳವಾಯಿ, ಸುಧೀರಕುಮಾರ, ಸಿದ್ದಣ್ಣ ಕಂಬಾರ, ಉಳವಪ್ಪ ಒಡೆಯರ, ಭೀಮಣ್ಣ ಕಾಸಾಯಿ, ಮಲ್ಲನಗೌಡ ಪಾಟೀಲ, ಸುರೇಶಬಾಬು ತಳವಾರ, ಶ್ರೀಶೈಲಗೌಡ ಕಮತರ, ಇನ್ನಿತರರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *