ರಾಜ್ಯ

ಮತ್ತೆ ರಾಜ್ಯದಲ್ಲಿ ಜೂನ್ 14ರ ವರೆಗೆ ಲಾಕ್‌ಡೌನ್ ವಿಸ್ತರಣೆ : ಹಲವರ ನೆರವಿಗೆ ವಿಶೇಷ ಪ್ಯಾಕೇಜ್

ಬೆಂಗಳೂರು prajakiran.com : ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಕರ್ನಾಟಕದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಅನ್ನು ಜೂನ್ 14 ರ ವರೆಗೆ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪ್ರಸುತ್ತ ಕೊರೋನಾ ಸೋಕಿನ ಪ್ರಮಾಣ ಇಳಿಮುಖವಾದರೂ ಸರಪಳಿಯನ್ನು ಕಡಿತಗೊಳಿಸುವ ಅನಿವಾರ್ಯ ಇರುವ ಕಾರಣ ಜೂನ್ 14 ರ ಮುಂಜಾನೆ 6 ಗಂಟೆ ವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶ ನೀಡಿದ್ದಾರೆ.

ಇದೇ ವೇಳೆ ರಫ್ತು ವಲಯದ ಕೈಗಾರಿಕೆಗಳಿಗೆ ಷರತ್ತು ಬದ್ಧ ಪರವಾನಿಗೆ ನೀಡಲಾಗಿದೆ ಎಂದು ಬಿ.ಎಸ್ ವೈ ವಿವರಿಸಿದರು.

ಜೊತೆಗೆ ಎರಡನೇ ಹಂತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು. ಪವರ್ ಲೋಮ್ 59 ಸಾವಿರ ಕಾರ್ಮಿಕರಿಗೆ ತಲಾ ಮೂರು ಸಾವಿರ ನೆರವು, ದೂರದರ್ಶನ ಹಾಗೂ ಚಲನಚಿತ್ರದ ಅಸಂಘಟಿತ 29 ಸಾವಿರ ಕಾರ್ಮಿಕರಿಗೆ ತಲಾ ಮೂರು ಸಾವಿರ, 18700 ಮೀನುಗಾರರಿಗೆ ಮೂರು ಸಾವಿರ, ಸಿ ದರ್ಜೆಯ ಮುಜರಾಯಿ ದೇವಾಲಯದ ಅರ್ಚಕರು, ಅಡುಗೆ ಸಹಾಯಕರಿಗೆ ತಲಾ‌ಮೂರು ಸಾವಿರ, ಆಶಾ ಕಾರ್ಯಕರ್ತೆ ಯರಿಗೆ ಮೂರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ಎರಡು ಸಾವಿರ ನೆರವು, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ ಐದು ಸಾವಿರ ನೆರವು ಪ್ರಕಟಿಸಲಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *