ರಾಜ್ಯ

ಧಾರವಾಡದ ಅಮರಗೋಳದಲ್ಲಿ ಪಕ್ಷಿ ಹಿಡಿಯುತ್ತಿದ್ದ ಆರೋಪಿ ಬಂಧನ

ಧಾರವಾಡ prajakiran.com : ಕೌಜಗ ಜಾತಿಯ ಪಕ್ಷಿಗಳನ್ನು ಕಟ್ಟಿಗೆಯಿಂದ ಮಾಡಿದ ಬಲೆಯಿಂದ ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ.

ಧಾರವಾಡ ಅರಣ್ಯ ವಿಭಾಗದ ಹುಬ್ಬಳ್ಳಿ ವಲಯದ ಅಮರಗೋಳದ ಎ.ಪಿ.ಎಮ್.ಸಿ ಆವರಣದಲ್ಲಿ ಕೌಜಗ ಜಾತಿಯ ಪಕ್ಷಿಗಳನ್ನು ಕಟ್ಟಿಗೆಯಿಂದ ಮಾಡಿದ ಬಲೆಯಿಂದ ಸೆರೆ ಹಿಡಿಯುವಾಗ ಖೆಡ್ಡಾಕ್ಕೆ ಕೆಡವಲಾಗಿದೆ. 



ಬಂಧಿತನನ್ನು ರಫೀಕ್ ಗುಲಬಸಾಬ ಯಲಿಗಾರ ಎಂದು ಗುರುತಿಸಲಾಗಿದ್ದು, ಇತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನೆಡಸುತ್ತಿದ್ದೇವೆ ಎಂದು ವಲಯ ಅರಣ್ಯ ಅಧಿಕಾರಿ ಶ್ರೀಧರ ತಗ್ಗಿನಮನಿಯವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದ್ದಾರೆ.

ಈ ಕಾರ್ಯಚರಣೆಯಲ್ಲಿ  ಉಪ ವಲಯ ಅರಣ್ಯ ಅಧಿಕಾರಿಗಳಾದ ಪಿ.ಎಮ್. ಕರಗುಪ್ಪಿ,  ಆರ್.ಕೆ.ಪೂಜಾರ ಅರಣ್ಯ ರಕ್ಷಕರಾದ ಎಸ್.ಎಫ್.ಹೊಸಮನಿ, ವಾಹನ ಚಾಲಕ ಚಂದ್ರು ಭಾಗವಹಿಸಿದ್ದರು.



ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ವಲಯ ತಂಡಕ್ಕೆ  ಧಾರವಾಡ ಅರಣ್ಯ ವಿಭಾಗದ ವತಿಯಿಂದ ಶ್ಲಾಘಿಸಿದ್ದಾರೆ.

 ನಾಡಿನ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿ ದೇಶದ ಆಸ್ತಿ. ಇದರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಪಾತ್ರವಿದೆ.

ಕಾಡು ಪ್ರಾಣಿ ಹಾಗೂ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆ ಕೊಡದೆ ಜೀವಿಸಲು ಬಿಡಿ. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಎಂದು ಧಾರವಾಡದ  ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಯಶಪಾಲ್ ಕ್ಷೀರಸಾಗರ ಎಚ್ಚರಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *