ಹುಬ್ಬಳ್ಳಿ ಪ್ರಜಾಕಿರಣ. ಕಾಮ್ : ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದ ಬಳಿ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ಏಕಾಏಕಿ ಬೆಂಕಿ ಜ್ವಾಲೆ ಬೃಹದಾಕಾರದಲ್ಲಿ ಆವರಿಸಿದ ಹಿನ್ನಲೆಯಲ್ಲಿ ಸಾರ್ವಜನಿಕರು ಆತಂಕಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ನಿನ್ನೆಯಷ್ಟೆ ನಗರದ ಗೋಕುಲ್ ರಸ್ತೆಯಲ್ಲಿರುವ ಸಾರಿಗೆ ಸಂಸ್ಥೆ ಗ್ರಾಮಾಂತರ ಬಸ್ ಡಿಪೋಗೆ ಬೆಂಕಿ ತಗಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೆನ್ನಲೆ ಇದೀಗ ವಿಮಾನ ನಿಲ್ದಾಣದ ಆವರಣದಲ್ಲಿ ಮತ್ತೇ ಬೆಂಕಿ ಅವಘಡ ಸಂಭವಿಸಿದೆ.
ಇನ್ನೂ ಬೆಂಕಿ ಅವಘಡದ ದೃಶ್ಯಾವಳಿಯನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಭಯಾನಕ ಬೆಂಕಿ ಅವಘಡ ಹಾಗೂ ಶಾಖಕ್ಕೆ ಇಲ್ಲಿನ ಸಾರ್ವಜನಿಕರು ಭಯ ಭೀತಿಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ.
ಈ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.