ಮುಂಬೈ prajakiran.com : ಬಾಲಿವುಡ್ ಹಿರಿಯ ನಟಿ ಸುರೇಖಾ ಸಿಕ್ರಿ(75) ಇಂದು ಬೆಳಿಗ್ಗೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ.
ನಟಿ ಸುರೇಖಾ ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಎರಡನೇ ಬಾರಿ ಬ್ರೈನ್ ಸ್ಟ್ರೋಕ್ ಆಗಿತ್ತು. ಇಂದು ಬೆಳಿಗ್ಗೆ ಹೃದಯಾಘಾತ ದಿಂದ ನಿಧನರಾಗಿದ್ದಾರೆ.
ಮೂರು ಬಾರಿ ರಾಷ್ಟ್ರಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದ ನಟಿ ಸಿಕ್ರಿ ಅವರು ‘ಬಧಾಯಿ ಹೊ’ ಚಿತ್ರ ಹಾಗೂ ‘ಬಾಲಿಕಾ ವಧು’ ಧಾರವಾಹಿಗಳ ಪಾತ್ರಗಳಿಂದ ಬಹಳ ಪ್ರಸಿದ್ಧಿ ಪಡೆದಿದ್ದರು.