ಸಿನಿಮಾ

ಕೊರೋನಾ ಧೃಡಪಟ್ಟು 5 ಕಳೆದರೂ ಇದುವರೆಗೆ ವರದಿ ಸಿಕ್ಕಿಲ್ಲ…..!

ನಟಿ ಅನು ಪ್ರಭಾಕರ್ ಅಳಲು

ಬೆಂಗಳೂರು prajakiran.com : ಏ.17ಎಂದು ನನಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಮೆಸೇಜ್ ಬಂದಿದೆ.

ಆದರೆ ನನ್ನ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ ಎಂದು ನಟಿ ಅನುಪ್ರಭಾಕರ್ ದೂರಿದ್ದಾರೆ.

ಗೌರವಾನ್ವಿತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರೇ, ನಾನು ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆ.

ಪಾಸಿಟಿವ್ ಎಂಬುದಾಗಿ ಏ.17 ರಂದು ಸಂದೇಶ ಬಂದಿತ್ತು. ಆದರೆ ಇದುವರೆಗೆ ನನ್ನ ಎಸ್ ಆರ್ ಎಫ್ ಐಡಿಯ ಕೊರೋನಾ ವರದಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಆಗಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ನನಗೆ ಕೊರೋನಾ ಬಂದ ಮೇಲೆ ಯಾವುದೇ ಒಬ್ಬ ಬಿಬಿಎಂಪಿ ಅಧಿಕಾರಿಗಳು ಕರೆ ಮಾಡಿಲ್ಲ.

ಇದುವರೆಗೆ ನಾನು ಬಿಯು ನಂಬರ್ ಕೂಡ ಪಡೆದಿಲ್ಲ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.

ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೂ ನನಗೆ ಕೊರೋನಾ ಸೋಂಕು ತಗುಲಿದೆ.

ವೈದ್ಯದ ಸಲಹೆ ಮೇರೆಗೆ ನಾನು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದೇನೆ.

ಇತ್ತೀಚಿಗೆ ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ.

ಕೊರೋನಾ 2ನೇ ಅಲೆ ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *