ಮುಂಬೈ Prajakiran.com : ಬಾಲಿವುಡ್ ಸೂಪರ್ ಸ್ಟಾರ್ ನಟ ಅಮೀರ್ ಖಾನ್ ಹಾಗೂ ಕಿರಣ್ ರಾವ್ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಈ ಕುರಿತು ಕಿರಣ್ ರಾವ್ ಮಾಹಿತಿ ನೀಡಿದ್ದು, ಪರಸ್ಪರ ಸಮ್ಮತಿ ಮೂಲಕ ವಿಚ್ಛೇಧನ ಪಡೆದಿರುವುದಾಗಿ ಹೇಳಿಕೆ ನೀಡಿದ್ದಾರೆ.
2005 ರಲ್ಲಿ ಅಮೀರ್ ಖಾನ್ ಹಾಗೂ ಕಿರಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸುಧೀರ್ಘ 15 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ.
ಇನ್ನೂ ಈ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ವಿಷಯ ತಿಳಿದ ಅಮೀರ್ ಅಭಿಮಾನಿಗಳಲ್ಲಿ ಬೇಸರವನ್ನು ಉಂಟುಮಾಡಿದೆ.