ಚಿಕ್ಕಬಳ್ಳಾಪುರ prajakiran.com : ಹೆಣ್ಣು ಮಗುವೊಂದನ್ನು ನೇಣುಬಿಗಿದು ಶೌಚಾಲಯದ ಕಿಟಕಿಯಲ್ಲಿ ಎಸೆದಿರುವ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಶನಿವಾರ ಬೆಳ್ಳಗೆ ಶೌಚಾಲಯ ಸ್ವಚಗೊಳಿಸಲು ಬಂದ ಸಿಬ್ಬಂದಿಗೆ ನವಜಾತ ಶಿಶು ಕಿಟಕಿಯಲ್ಲಿ ಇದಿದ್ದು ಕಂಡುಬಂದಿದೆ.
ಸಿಬ್ಬಂದಿ ಕೂಡಲೇ ವಿಚಾರವನ್ನು ವೈದ್ಯರ ಗಮನಕ್ಕೆ ತಂದು ಪರಿಶೀಲನೆ ಮಾಡಿ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಮಗು ಅಷ್ಟರಲ್ಲೇ ಪ್ರಾಣ ಬಿಟ್ಟಿತ್ತು ಎಂದು ತಿಳಿದು ಬಂದಿದೆ.
ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಮಾಡುತ್ತಿದ್ದು ಆಸ್ಪತ್ರೆಯ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದಾರೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.