ನವದೆಹಲಿ prajakiran. com : ಮತ್ತೆ ಪೆಟ್ರೋಲ್ ಲೀಟರ್ ಗೆ 26 ಪೈಸೆ, ಡೀಸೆಲ್ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 91.53 ರೂ. ಆದರೆ ವಾಣಿಜ್ಯನಗರಿ ಮುಂಬೈನಲ್ಲಿ ಪೆಟ್ರೋಲ್ ದರ 97.86 ರೂ. ಗೆ ಏರಿಕೆಯಾಗಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಗೆ 93.38 ರೂ. ಹಾಗೂ ಕೊಲ್ಕತ್ತಾದಲ್ಲಿ 91.66 ರೂ. ಆಗಿದೆ.
ಬೆಂಗಳೂರಿನಲ್ಲಿ 94.30 ರೂ. ತಲುಪಿದೆ. ಡೀಸಲ್ ದರದಲ್ಲೂ ಏರಿಕೆಯಾಗಿದ್ದು, ದೆಹಲಿಯಲ್ಲಿ ಲೀಟರ್ ಡೀಸೆಲ್ 82.06 ರೂ. ಆಗಿದೆ.
ಮುಂಬೈ ನಲ್ಲಿ 89.17 ರೂ. ಚೆನ್ನೈ ನಲ್ಲಿ 86.96 ರೂ. ತಲುಪಿದ್ದು, ಕೊಲ್ಕತ್ತಾದಲ್ಲಿ 84.90 ರೂ. ಆಗಿದೆ. ಬೆಂಗಳೂರಿನಲ್ಲಿ 86.64 ರೂ. ಗೆ ಏರಿಕೆಯಾಗಿದೆ.