ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡದ ಹಲವು ಇಸ್ಪೀಟ್ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿದ್ದುಲಕ್ಷಾಂತರ ರೂಪಾಯಿ ಜಪ್ತಿ ಮಾಡಿ, ಇಸ್ಫೀಟ್ ಕುಳಗಳಿಗೆ ಶಾಕ್ ನೀಡಿದ್ದಾರೆ.
ಧಾರವಾಡದ ಉಪನಗರ ಪೊಲೀಸರು ದಾಳಿ ನಡೆಸಿ,
42 ಜನರನ್ನ ವಶಕ್ಕೆ ಪಡೆದಿದ್ದಾರೆ. ಪೋಲಿಸರು ಈ ಸಂಬಂಧ
ನೆಹರು ನಗರ, ಎತ್ತಿನಗುಡ್ಡ, ಕೊಪ್ಪದಕೇರಿ, ಮಾಳಾಪೂರ ಸೇರಿದಂತೆ ಹಲವೆಡೆ ದಾಳಿ ನಡೆಸಿದ್ದಾರೆ.
ಅಲ್ಲದೆ ಬಂಧಿತರಿಂದ 95,290 ರೂಪಾಯಿ, 7 ಮೂಬೈಲ್, ಇಸ್ಪೆಟ್ ಎಲೆಗಳು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಧಾರವಾಡದ
ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ದೀಪಾವಳಿ ಸಂದರ್ಭದಲ್ಲಿ ಅವಳಿನಗರ ವ್ಯಾಪ್ತಿಯ ಹಲವಡೆ ಇಸ್ಪೀಟು ಎಲೆಗಳ ಆಟ ಜೋರಾಗಿ ನಡೆದಿದೆ.
ಕೆಲವಡೆ ಪೊಲೀಸರು ಜಾಣಕುರುಡು ತೋರಿಸಿದರೆ ಕೆಲವಡೆ ಬಿಸಿ ತಾಕಿಸಿದ್ದಾರೆ.
ಇನ್ನೂ ಕೆಲವು ಕಡೆ ಕ್ಲಬ್ ಮಾಲೀಕರ ಪರವಾಗಿ ಕೆಲಸ ಮಾಡಿದ್ದಾರೆಎಂದು ಹಣ ಕಳೆದುಕೊಂಡವರು ಆರೋಪಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮುಖಂಡರು ಈ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿರುವುದು ಇಲ್ಲಿ ಸ್ಮರಿಸಬಹುದು.