ರಾಜ್ಯ

ಬೆಳಗಾವಿ ಐಜಿಪಿ ವಿರುದ್ಧ ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಅಸಮಾಧಾನ

ಧಾರವಾಡ prajakiran.com :
ಧಾರವಾಡ ಜಿಲ್ಲೆಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ ಪತ್ರಿಕಾಗೋಷ್ಠಿ ನಡೆಸಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬೇಕಂತಲೇ ಪೊಲೀಸರು ದೀಪಾವಳಿ ಹಬ್ಬಕ್ಕೆ ಅಡ್ಡಿಪಡಿಸಿದ್ದಾರೆ.
ದೀಪಾವಳಿ ಹಿಂದೂಗಳ ದೊಡ್ಡ ಹಬ್ಬ.
ಅದೇ ದಿನ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಬೆಳಗಾವಿ ವಲಯದ ಹಲವು ಜಿಲ್ಲೆಯ ವ್ಯಾಪ್ತಿಯಲ್ಲಿ ಜೂಜಾಟ ನಡೆದಿದೆ.

ಬೇರೆ ಕ್ಲಬ್ ಗಳಲ್ಲಿಯೂ ಜೂಜು ನಡೆದಿದ್ದವು. ಹುಬ್ಬಳ್ಳಿ
ನಗರದ ಜಿಮ್‌ಖಾನಾ ಕ್ಲಬ್ ನಲ್ಲಿ ಜೂಜಾಡಿದ್ದಾರೆ. ಅದೇ ರೀತಿ
ಬೇರೆ ಬೇರೆ ಕ್ಲಬ್ ಗಳಲ್ಲಿ ಜೂಜು ಆಡಲಾಗಿದೆ.

ಪೊಲೀಸರು ದೊಡ್ಡವರ ಕ್ಲಬ್ ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಬೇಕಂತಲೇ ಕೆಲವು ಕ್ಲಬ್ ಗಳನ್ನು ಟಾರ್ಗೆಟ್ ಮಾಡಲಾಗಿದೆ.

ದೊಡ್ಡವರಿಗೊಂದು, ಸಣ್ಣವರಿಗೊಂದು ನ್ಯಾಯವೇ ಎಂದು ದೂರಿದರು.
ಧಾರವಾಡವನ್ನಷ್ಟೇ ಏಕೆ ಟಾರ್ಗೆಟ್ ಮಾಡಲಾಗಿದೆ?

ಉತ್ತರ ವಲಯ ಐಜಿಪಿಗೆ ವಿಜಯಪುರ, ಗದಗ, ಹಾವೇರಿ ಸೇರಿದಂತೆ ಬೇರೆ ಜಿಲ್ಲೆಗಳು ಕಾಣಲಿಲ್ಲವೇ? ಎಂದು ಪ್ರಶ್ನಿಸಿದರು.
ಐಜಿಪಿ ರಾಘವೇಂದ್ರ ಸುಹಾಸ್ ಅವರ ನಡೆಗೆ ಬೇಸರ ವ್ಯಕ್ತಪಡಿಸಿದರು.

ಇಂತಹ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿಯೇ ಬೇಲ್ ನೀಡಲಾಗುತ್ತದೆ.
ಆದರೆ ಇಲ್ಲಿ ಬೇಕಂತಲೇ ತೊಂದರೆ ಕೊಡಲಾಗಿದೆ.
ಪೊಲೀಸರ ದಬ್ಬಾಳಿಕೆ ಹೆಚ್ಚಾಗಿದೆ
ಕೆಲವರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗಿದೆ.

ವೃದ್ಧರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ.
ಜಾಮೀನು ನೀಡಿದ ಬಳಿಕ ಮತ್ತೆ ಠಾಣೆಯಲ್ಲಿ ಹಲವು ಗಂಟೆ ಕೂಡಿಸಿದ್ದು ಏಕೆ, ಪೊಲೀಸ್ ಜೀಪ್ ಕೊಟ್ಟು ಮನೆಗೆ ಕರೆಸಿಕೊಳ್ಳುವ ಅಗತ್ಯವೇನಿತ್ತು.

ಠಾಣೆಗೆ ಕರೆಸಿ ಮತ್ತೆ ವಿಚಾರಣೆ ನೆಪದಲ್ಲಿ ಹಿರಿಯ ನಾಗರಿಕರು ಎಂಬುದನ್ನು ಮರೆತು ಹೊಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳ ದೊಡ್ಡ ಹಬ್ಬ ದೀಪಾವಳಿ
ವೈಯಕ್ತಿಕ ಪ್ರತಿಷ್ಠೆಗಾಗಿ ಪೊಲೀಸರು ಇಂಥ ಕೆಲಸ ಮಾಡಿದ್ದಾರೆ
ಧಾರವಾಡ ಜಿಲ್ಲೆಯನ್ನೇ ಏಕೆ ಆಯ್ದುಕೊಳ್ಳಲಾಯಿತು? ಎಂಬುದನ್ನು ಪೊಲೀಸರು ಉತ್ತರಿಸಬೇಕು ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಆಗ್ರಹಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರು ಒಳ್ಳೆಯವರು. ಅವರ ಗಮನಕ್ಕೆ ಈ ವಿಷಯ ತರಲಾಗಿದೆ. ಪೊಲೀಸರ ನಡೆ ಕುರಿತು ತನಿಖೆ ನಡೆಸಬೇಕು.

ಅಲ್ಲಿ ದೊರೆತ ಮೊತ್ತ ಮತ್ತು ಪೊಲೀಸರು ತೋರಿಸಿದ ಮೊತ್ತದ ವ್ಯತ್ಯಾಸವನ್ನು ನಾನು ಗಮನಿಸಿಲ್ಲ. ನಾನು ದೇವರ ಪೂಜೆಯ ಪ್ರಸಾದಕ್ಕೆ ಹೋಗಿದ್ದೆ. ಕೆಲವರು ಉತ್ತರ ಪೂಜೆಯ ಊಟಕ್ಕೆ ಹೋಗಿದ್ದರು ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *