ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ prajakiran.com : ನಕ್ಷತ್ರ ಆಕಾರದ ಆಮೆಯನ್ನು ಮಾರಾಟ ಮಾಡಲು ಬಂದಿದ್ದ ಶಿವಮೊಗ್ಗ ಮೂಲದ ಆರು ಆರೋಪಿಗಳಲ್ಲಿ ಐವರನ್ನು ಮೊಬೈಲ್ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಪೈಕಿ ಒಬ್ಬ ಆರೋಪಿ ಮಾತ್ರ ಪರಾರಿಯಾಗಿದ್ದಾರೆ. ಬಂಧಿತರಿಂದ ನಕ್ಷತ್ರ ಆಕಾರದ ಆಮೆಯನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ಮುಂಜಾನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಕಾರಿನಲ್ಲಿ ಬಂದಿದ್ದ ಆರೋಪಿಗಳ ಖಚಿತ ಮಾಹಿತಿಯನ್ನು ತಿಳಿದ ಸ್ಕ್ವ್ಯಾಡ್ ಹಾಗೂ ಅರಣ್ಯ ಅಧಿಕಾರಿಗಳು ಅವರನ್ನು ಬಂಧಿಸಲು ಮುಂದಾದಾಗ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ಉಳಿದ ಐದು ಜನ ಆರೋಪಿಗಳು, ನಕ್ಷತ್ರ ಆಮೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಆರೋಪಿಗಳಿಗೆ ಕೋವಿಡ್ ಟೆಸ್ಟ್ ಮಾಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.