ಧಾರವಾಡ prajakiran.com : ಧಾರವಾಡ ಜಿಲ್ಲೆಯ ಕರೋನಾ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.
ಸೋಂಕಿತರ ಸಂಖ್ಯೆ ಶನಿವಾರ ಮತ್ತೆ ಸಾವಿರ ಗಡಿ ಸಮೀಪಿಸಿದೆ.
ಇಂದು ಮತ್ತೆ ಬರೋಬ್ಬರಿ 901 ಜನರಿಗೆ ಕರೋನಾ ಪಾಸಿಟಿವ್ ಬಂದಿದೆ.
ದುರಂತದ ಸಂಗತಿಯೆಂದರೆ ಇಂದು ಕೂಡ 9 ಸೋಂಕಿತರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ 8 ಹಾಗೂ ನಾನ್ ಕೋವಿಡ್ ಗೆ ಒಬ್ಬರು ಚಿಕಿತ್ಸೆ ಫಲಿಸದೆ
ಸಾವನ್ನಪ್ಪಿದ್ದಾರೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.
ಆತಂಕದ ವಿಚಾರವೆಂದರೆ 540 ಜನ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5698 ಕ್ಕೆ ಎರಿಕೆ ಆಗಿದೆ.
ಸಮಾಧಾನದ ಸಂಗತಿಯೆಂದರೆ 934 ಸೋಂಕಿತರು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.