ರಾಜ್ಯ

ಧಾರವಾಡದ ತಡಸಿನಕೊಪ್ಪ ನಿವಾಸಿ ಸೇರಿ ಆರು ಜನರ ಸಾವು…!





ಧಾರವಾಡ prajakiran.com : ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಆರು ಜನ ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು   ತಿಳಿಸಿದೆ.

ಆ ಮೂಲಕ ಧಾರವಾಡ ಜಿಲ್ಲೆಯ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 3187 ಕ್ಕೆ ಏರಿದಂತಾಗಿದೆ.  

ಈ ಪೈಕಿ ಇದುವರೆಗೆ 1334 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದರೆ, 1758 ಪ್ರಕರಣಗಳು ಸಕ್ರಿಯವಾಗಿವೆ.

37 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇದುವರೆಗೆ 95 ಜನ ಮೃತಪಟ್ಟಂತಾಗಿದೆ.



ಮೃತ ಸೋಂಕಿತರನ್ನು ಧಾರವಾಡ ತಡಸಿನಕೊಪ್ಪ ನಿವಾಸಿ ಪಿ-60158 (34,ಪುರುಷ),  ಹುಬ್ಬಳ್ಳಿ ಜಯಪ್ರಕಾಶ್ ನಗರ  ನಿವಾಸಿ ಪಿ-73082 ( 72,ಪುರುಷ), 

ಹಳೆಹುಬ್ಬಳ್ಳಿಯ ಆನಂದ ನಗರ ನಿವಾಸಿ ಪಿ-60038 (49 ,ಮಹಿಳೆ),ಹುಬ್ಬಳ್ಳಿಯ ಸುಳ್ಳ ಗ್ರಾಮದ ನಿವಾಸಿ ಪಿ-47509 ( 48,ಪುರುಷ), ನವಲಗುಂದ ತಾಲೂಲು ಬಸಾಪುರ ಗ್ರಾಮದ ನಿವಾಸಿ  ಪಿ-63695 ( 45,ಪುರುಷ),



ಹುಬ್ಬಳ್ಳಿ ವಿದ್ಯಾನಗರ ನಿವಾಸಿ ಪಿ- 59662 ( 57,ಪುರುಷ) ಇವರೆಲ್ಲರೂ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ್ದರು.

ಚಿಕಿತ್ಸೆ ಫಲಿಸದೆ ಧಾರವಾಡ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ.

ಅವರ ಪ್ರಾರ್ಥಿವ ಶರೀರಗಳಅಂತ್ಯಕ್ರಿಯೆಯನ್ನು ಕೋವಿಡ್ 19 ನಿಯಮಾನುಸಾರ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.


PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *