ರಾಜ್ಯ

ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ಕಟ್ಟಿ, ಪೂರ್ಣಿಮಾ ಸೊಪ್ಪಿಮಠ ವಿರುದ್ದ ಮತ್ತೊಂದು 420 ಕೇಸ್…..!

ಧಾರವಾಡ prajakiran. com : ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದು ದೇಶ ಒಂದು ಪಠ್ಯದ (ಒನ್ ನೇಶನ್ ಒನ್ ಸಿಲ್ಯಾಬಸ್) ಹೆಸರಿನಲ್ಲಿ ವಿವಿಧ ಹುದ್ದೆಗೆ ತರಬೇತಿ ನೀಡಿ ಆನಂತರ
ಕೇಂದ್ರ ಸರಕಾರದಲ್ಲಿ ಉನ್ನತ ಮಟ್ಟದ ನೌಕರಿ ಕೊಡಿಸುವುದಾಗಿ ಆಮೀಷ ಒಡ್ಡಿ ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠ ಹಾಗೂ ಇತರರು ವಂಚಿಸಿದ್ದಾರೆ ಎಂದು  ನಿನ್ನೇ ರಾತ್ರಿ ಸುರೇಶ ತಿಮ್ಮಾಪುರ ಹಾಗೂ ಶ್ರೀಕಾಂತ ತಿಮ್ಮಾಪುರ ಎಂಬುವರು 420 ದೂರು ದಾಖಲಿಸಿದ್ದಾರೆ.

ಅವರಿಗೆ ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ ಒಂದು ವರ್ಷ ದುಡಿಸಿಕೊಂಡು ಪಡೆದ ಹಣವನ್ನು ಮರಳಿಸದೆ ವಂಚನೆ, ಮೋಸ ಹಾಗೂ ಅವರ ವಿರುದ್ಧವೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.

ಅದರ ಜೊತೆಗೆ ಅವರ ಅಣ್ಷ ಶ್ರೀಕಾಂತ ತಿಮ್ಮಾಪುರ ಅವರಿಗೆ ಹಾವೇರಿ ಹಾಗೂ ರಾಣೆಬೆನ್ನೂರ ಪ್ರಾಂಚೈಸಿ ನೀಡಿ ಹತ್ತು ಲಕ್ಷ ಪಡೆದುದ್ದಲ್ಲದೆ, ಅವರ ಮೂಲಕ 44 ಹುಡುಗರ ಬಳಿ ಅಂದಾಜು 1 ಕೋಟಿ 25 ಲಕ್ಷ ಪಡೆದು ಮೋಸ , ವಂಚನೆ ಮಾಡಿರುವ ಜೊತೆಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ‌.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಒಂದು ದೇಶ ಒಂದು ಪಠ್ಯದ (ಒನ್ ನೇಶನ್ ಒನ್ ಸಿಲ್ಯಾಬಸ್) ಹೆಸರಿನಲ್ಲಿ ವಿವಿಧ ಹುದ್ದೆಗೆ ತರಬೇತಿ ನೀಡಿ ಆನಂತರ
ಕೇಂದ್ರ ಸರಕಾರದಲ್ಲಿ ಉನ್ನತ ಮಟ್ಟದ ನೌಕರಿ ಕೊಡಿಸುವುದಾಗಿ ಆಮೀಷ ಒಡ್ಡಿ ರಾಘವೇಂದ್ರ ಕಟ್ಟಿ ಹಾಗೂ ಪೂರ್ಣಿಮಾ ಸೊಪ್ಪಿಮಠ ಹಾಗೂ ಇತರರು ವಂಚಿಸಿದ್ದಾರೆ ಎಂದು ಹಾವೇರಿಯ ಕುರಬಗೊಂಡ ಗ್ರಾಮದ ಸುರೇಶ ತಿಮ್ಮಾಪುರ ಎಂಬುವರು ಭಾನುವಾರ ರಾತ್ರಿ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೇಂದ್ರ ಸರಕಾರಿ ನೌಕರಿ ಕೊಡಿಸುವುದಾಗಿ 2021ರಲ್ಲಿಯೇ
4 ಲಕ್ಷ ರೂಪಾಯಿ ಪಡೆದು ಒಂದು ವರ್ಷ ಕಳೆದರೂ ನೌಕರಿ ಕೊಡಿಸದೆ ವಂಚನೆ ಮಾಡಿದ್ದಾರೆ.

ಅಲ್ಲದೆ, ಕೊಟ್ಟ ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ, ಹಪ್ತಾ ವಸೂಲಿಯಂತಹ ಆರೋಪ ಮಾಡಿ ಸುಳ್ಳು ಪ್ರಕರಣ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈಗಾಗಲೇ ರಾಘವೇಂದ್ರ ಕಟ್ಟಿ ವಿರುದ್ದ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ದಾಖಲಾದ ನಾಲ್ಕನೇ 420 ಪ್ರಕರಣ ಹಾಗೂ ಜೀವ ಬೆದರಿಕೆ ಕೇಸ್ ಇದಾಗಿದೆ.

ಧಾರವಾಡದ ಕಮಲಾಪುರ ಕ್ರಾಸ್ ನಲ್ಲಿರುವ ಎಸ್ ಜಿ ಎಸ್ ಎಸ್ ಹೆಚ್ ಆರ್ ಕನ್ಸಲ್ಟೆನ್ಸಿ ಮೂಲಕ ನಂಬಿಸಿ 4 ಲಕ್ಷ ರೂಪಾಯಿ ಪಡೆದು ಆನಂತರ ನೌಕರಿಯು ‌ಕೊಡಿಸದೆ, ಪಡೆದ ಹಣವನ್ನು ಹಿಂತಿರುಗಿಸದೆ ವಂಚಿಸಿದ ಆರೋಪದ ಮೇಲೆ 420 ಮೋಸ, ವಂಚನೆ ಹಾಗೂ 506 ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.

ನೌಕರಿ ಸಿಗದೆ ವರ್ಷ ಪರದಾಡಿ ನಂತರ ಮರಳಿ ಹಣ ಕೇಳಿದರೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ನೊಂದಿರುವ ಅಭ್ಯರ್ಥಿ ಸುರೇಶ ತಿಮ್ಮಾಪುರ ಹಾಗೂ ಅವರ ಅಣ್ಣ ಶ್ರೀಕಾಂತ ತಿಮ್ಮಾಪುರ ಒಟ್ಟು 1 ಕೋಟಿ 35 ಲಕ್ಷ ಕಳೆದುಕೊಂಡಿರುವುದಾಗಿ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ನಾಲ್ಕು ಪ್ರಕರಣ ದಾಖಲಾದರೂ ಧಾರವಾಡದ ಉಪನಗರ ಪೊಲೀಸರು ಮಾತ್ರ ಈವರೆಗೆ ರಾಘವೇಂದ್ರ ಕಟ್ಟಿಯನ್ನು ಬಂಧಿಸದಿರುವುದು ಹತ್ತು ಹಲವು ಅನುಮಾನಗಳನ್ನು ಹುಟ್ಟು ಹಾಕಿರುವುದು ಸುಳ್ಳಲ್ಲ.

ಇದೇ ವೇಳೆ ಎಸ್‌ಜಿಎಎಸ್‌ಎಸ್ ಕನ್ಸಲ್ಟನ್ಸಿ ಸಂಸ್ಥೆಯ ಕಾನೂನು ಸಲಹೆಗಾರರು ಆಗಿರುವ ರಾಘವೇಂದ್ರ ಕಟ್ಟಿ ಪತ್ನಿ ಸ್ನೇಹಾ ಕಟ್ಟಿ ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರಿ ಕೊಡಿಸುತ್ತೇವೆಂದು ಕೋಟ್ಯಂತರ ರೂ. ಅವ್ಯವಹಾರ ಮಾಡಿದೆ ಎಂದು ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿದ್ದ ಮೂವರು ಆಧಾರ ರಹಿತ ಆರೋಪ ಮಾಡಿದ್ದು, ಅವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಸ್ಟೈಫಂಡ್ ಆಧಾರಿತ ತರಬೇತಿ ಕೇಂದ್ರವಾಗಿದ್ದು ಅವರಿಗೆ ಪ್ರತಿ ತಿಂಗಳು ತಲಾ ೩೦ ಸಾವಿರ ರೂ.ದಂತೆ ಸಂಬಳ ಸಹ ನೀಡಲಾಗಿದೆ.

ನಾವು ನೀಡಿದ ದೂರಿಗೆ ಪ್ರತಿಕಾರವಾಗಿ ಸಂಸ್ಥೆಗೆ ಸಂಬಂಧಿಸದ ದಾಖಲೆ ತೋರಿಸಿ ಅವ್ಯವಹಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ.

ನಮ್ಮ ಸಂಸ್ಥೆಯು ಕಾನೂನು ಪ್ರಕಾರವೇ ನಡೆದುಕೊಳ್ಳುತ್ತಿದ್ದು ಯಾವ ಅಭ್ಯರ್ಥಿಗಳಿಗೆ ಹಣ ಪಡೆದು ಉದ್ಯೋಗ ನೀಡುವ ಭರವಸೆ ನೀಡಿಲ್ಲ ಎಂದು ಹೇಳಿದರು.

ಆದರೆ ಪತ್ರಕರ್ತರ ಬಹುತೇಕ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡದೆ ಕಾನೂನು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಹಾರಿಕೆ ಉತ್ತರ ನೀಡಿದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *