ರಾಜ್ಯ

ಧಾರವಾಡ ಜಿಲ್ಲೆಯ ವಿವಿಧ ಮತಕ್ಷೇತ್ರದಲ್ಲಿ 21ನಾಮಪತ್ರ ಸಲ್ಲಿಕೆ

ಧಾರವಾಡ ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರದಲ್ಲಿ ಇಂದು 21ನಾಮಪತ್ರ ಸಲ್ಲಿಕೆ

ಧಾರವಾಡ ಪ್ರಜಾಕಿರಣ. ಕಾಮ್ ಏ.17 :  ಇಂದು (ಏ.17) ನವಲಗುಂದ 5, ಕುಂದಗೋಳ 5, ಧಾರವಾಡ 3, ಹುಬ್ಬಳ್ಳಿ ಧಾರವಾಡ ಪೂರ್ವ 2, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ 1, ಹುಬ್ಬಳ್ಳಿ ಧಾರವಾಡ ಪಶ್ಚಿಮ 4 ಮತ್ತು ಕಲಘಟಗಿ 1 ಸೇರಿ ಒಟ್ಟು 21 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನವಲಗುಂದ-69 ವಿಧಾನಸಾಭಾ ಮತಕ್ಷೇತ್ರಕ್ಕೆ ಶಂಕರ ಪಾಟೀಲ ಮುನೇನಕೊಪ್ಪ (ಭಾ.ಜ.ಪ) ಎರಡು ನಾಮಪತ್ರಗಳನ್ನು, ಮೈಲಾರಪ್ಪ ಭರಮಪ್ಪ ಚವಡಿ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಶಿವಾನಂದ ಬಸಪ್ಪ ಕರಿಗಾರ (ಪಕ್ಷೇತರ ಅಭ್ಯರ್ಥಿ), ಮಲ್ಲಿಕಾರ್ಜುನಗೌಡ ಬಾಳನಗೌಡರ ಪಕ್ಷೇತರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕುಂದಗೋಳ-70 ವಿಧಾನಸಭಾ ಮತಕ್ಷೇತ್ರಕ್ಕೆ ಸಿದ್ದನಗೌಡ ಚಿಕ್ಕನಗೌಡ್ರ (ಪಕ್ಷೇತರ ಅಭ್ಯರ್ಥಿ), ಮಂಜುನಾಥಗೌಡ ಪಾಟೀಲ (ಭಾ.ಜ.ಪ.) ಎರಡು ನಾಮಪತ್ರಗಳನ್ನು ಮತ್ತು ಶರಣಪ್ಪ ನಿಂಗಪ್ಪ ಕುರಿಯವರ (ಪಕ್ಷೇತರ), ನಿರಂಜನಯ್ಯ ರುದ್ರಯ್ಯ ಮಣಕಟ್ಟಿಮಠ (ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಯಾಗಿ ನಾಮಪತ್ರ  ಸಲ್ಲಿಸಿದ್ದಾರೆ.

ಧಾರವಾಡ-71 ವಿಧಾನಸಭಾ ಮತಕ್ಷೇತ್ರಕ್ಕೆ ರಾಜಶೇಖರಯ್ಯ ಕಂತಿಮಠ (ಪಕ್ಷೇತರ), ಮಧುಲತಾ ಗೌಡರ (ಸೋಸಿಯಾಲಿಸ್ಟ್ ಯುನಿಟಿ ಸೆಂಟರ್ ಆಪ್ ಇಂಡಿಯಾ (ಕಮ್ಯುನಿಸ್ಟ್)), ವಿನಯ ಕುಲಕರ್ಣಿ (ಭಾ.ರಾ.ಕಾಂ) ಮತ್ತು ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರಕ್ಕೆ ಬಸವರಾಜ ತೇರದಾಳ (ಆಮ್ ಆದ್ಮಿ ಪಕ್ಷ), ಪ್ರಸಾದ ಅಬ್ಬಯ್ಯ (ಭಾ.ರಾ.ಕಾಂ) ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-73 ವಿಧಾನಸಭಾ ಮತಕ್ಷೇತ್ರಕ್ಕೆ ರಾಜು ನಾಯಕವಾಡಿ (ಸ್ವತಂತ್ರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರಕ್ಕೆ ಅರವಿಂದ ಮುಗದೂರ (ಆಮ್ ಆದ್ಮಿ ಪಕ್ಷ), ಪಾಂಡುರಂಗ ನೀರಲಕೇರಿ (ಭಾ.ರಾ.ಕಾಂ), ರಾಜಶೇಖರಯ್ಯ ವಿರುಪಾಕ್ಷಯ್ಯ ಕಂತಿಮಠ (ಪಕ್ಷೇತರ), ಮನ್ನಾರಿ ವಾದಿರಾಜ (ಆಲ್ ಇಂಡಿಯಾ ಹಿಂದುಸ್ಥಾನ ಕಾಂಗ್ರೆಸ್ ಪಾರ್ಟಿ) ಮತ್ತು ಕಲಘಟಗಿ-75 ವಿಧಾನಸಭಾ ಮತಕ್ಷೇತ್ರಕ್ಕೆ ಸಂತೋಷ ಎಸ್. ಲಾಡ್ (ಭಾ.ರಾ.ಕಾಂ) ಅವರು ನಾಮತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *