ರಾಜ್ಯ

ಕೋವಿಡ್ ನಿಂದ ಗುಣಮುಖರಾದ 16 ಜನ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆ

ಧಾರವಾಡ prajakiran.com : ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಜೂನ್ 1 ರಂದು ಸೋಮವಾರ 11 ಜನ ಹಾಗೂ ಜೂನ್ 2 ರಂದು ಮಂಗಳವಾರ 5 ಜನ ಸೇರಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 16 ಜನ ಗುಣಮುಖರಾಗಿ ಹುಬ್ಬಳ್ಳಿಯ ಕಿಮ್ಸ್ ನಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.

ಗುಜರಾತಿನ ಅಹಮದಾಬಾದಿನಿಂದ ಮೇ 12 ರಂದು ಆಗಮಿಸಿದ್ದ ,
ಪಿ-879( 55, ಪುರುಷ),ಪಿ-880(31,ಪುರುಷ),
ಪಿ-881(25,ಪುರುಷ),ಪಿ-882(70,ಪುರುಷ),ಪಿ-883(26,ಪುರುಷ),ಪಿ-884(18,ಪುರುಷ),ಪಿ-885(19,ಪುರುಷ),ಪಿ-886(20,ಪುರುಷ),ಪಿ-887(27,ಪುರುಷ) ಬಿಡುಗಡೆಯಾದರು.

ಮೇ.17 ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ ಪಿ-1124 (16, ಬಾಲಕ) , ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದ್ದ ಪಿ-1123 ( 39,ಪುರುಷ), ಪಿ-1142 ( 28, ಮಹಿಳೆ), ಪಿ-1143 ( 25, ಪುರುಷ) ಚೇತರಿಕೆ ಆಗಿ ಮನೆಗೆ ತೆರಳಿದರು.

ಮೇ 21 ರಂದು ಮುಂಬೈನಿಂದ ಹಿಂದಿರುಗಿದ್ದ ಪಿ-1509 ( 35, ಪುರುಷ) ಹಾಗೂ ಮೇ 22 ರಂದು ನವದೆಹಲಿಯಿಂದ ವಾಪಸಾಗಿದ್ದ ಪಿ-1609( 22, ಪುರುಷ ) ಮತ್ತು ಪಿ-1610 ( 23, ಪುರುಷ)  ಬಿಡುಗಡೆಯಾಗಿದ್ದಾರೆ.

ಇವರೆಲ್ಲರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಎಕ್ಸ್ ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ ನಂತರ ಇವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ.

ಆ ಮೂಲಕ ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ 27 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 23 ಜನ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *