ರಾಜ್ಯ

ರಾಜ್ಯದಲ್ಲಿ ಮಂಗಳವಾರ ಸೋಂಕಿಗೆ ಬರೋಬ್ಬರಿ 102 ಸಾವು, 5536 ಪ್ರಕರಣ ಪತ್ತೆ

ಬೆಂಗಳೂರು prajakiran.com : ರಾಜ್ಯದಲ್ಲಿ ಮಂಗಳವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 102 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 5536 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,07,001 ಕ್ಕೆ ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ 2819ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು  40504 ಜನ ಗುಣಮುಖರಾಗಿದ್ದು, 64,434 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 612 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಮಂಗಳವಾರವೂ 102 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 2055 ಕ್ಕೆ ಏರಿಕೆಯಾದಂತಾಗಿದೆ.

ಮಂಗಳವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ 1898 ಬರೋಬ್ಬರಿ ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ  ಬಳ್ಳಾರಿ 452, ಕಲಬುರಗಿ 283, ಬೆಳಗಾವಿ 228 , ಮೈಸೂರು 220, ತುಮಕೂರು 207, ಕೋಲಾರ 174, ದಕ್ಷಿಣ ಕನ್ನಡ ಹಾಗೂ ಧಾರವಾಡ 173 , ವಿಜಯಪುರ 153, ಕೊಪ್ಪಳ 144 , ದಾವಣಗೆರೆ 135,  ಬಾಗಲಕೋಟೆ 115, ಉಡುಪಿ 109, ಹಾಸನ 108, ಬೆಂಗಳೂರು ಗ್ರಾಮಾಂತರ 107, ರಾಮನಗರ 101, ಮಂಡ್ಯ 96, ರಾಯಚೂರು 93, ಗದಗ 73, ಚಿಕ್ಕಬಳ್ಳಾಪುರ 72, ಯಾದಗಿರಿ 67, ಚಿತ್ರದುರ್ಗ 66, ಚಿಕ್ಕಮಗಳೂರು 55, ಶಿವಮೊಗ್ಗ 54, ಚಾಮರಾಜನಗರ 52, ಉತ್ತರಕನ್ನಡ 47, ಹಾವೇರಿ 40, ಬೀದರ 39, ಕೊಡಗು 2  ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಮಂಗಳವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 40  ಜನ ಸಾವನ್ನಪ್ಪಿದ್ದಾರೆ.

ಮೈಸೂರು 8, ಉಡುಪಿ 7, ಬೆಳಗಾವಿ, ಕಲಬುರಗಿ ಹಾಗೂ ಧಾರವಾಡ  ತಲಾ 6, ಹಾಸನ 5, ದಾವಣಗೆರೆ 4, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ತಲಾ 3, ಗದಗ, ಬೀದರ, ಬಾಗಲಕೋಟೆ ತಲಾ 2, ತುಮಕೂರು, ಕೋಲಾರ, ವಿಜಯಪುರ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಉತ್ತರಕನ್ನಡ, ಕೊಡಗು ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *