ರಾಜ್ಯ

ಧಾರವಾಡದ ಮಾದನಭಾವಿಯಲ್ಲಿ ವಿವೇಕ ಜ್ಯೋತಿ ಯಾತ್ರೆ

ಸ್ವಾಮಿ ವಿವೇಕಾನಂದರ ೧೬೦ನೇ ಜಯಂತ್ಯೋತ್ಸವ ಆಚರಣೆ ಅಂಗವಾಗಿ ಜನಜಾಗೃತಿ ಸಂಘದಿAದ ಹತ್ತು ಹಲವು ಕಾರ್ಯಕ್ರಮ

ವಿಭಿನ್ನ ಹಾಗೂ ಅರ್ಥಪೂರ್ಣ ಆಚರಣೆಗೆ ಮೆರಗು ನೀಡಿದ ನೂರಾರು ಮಕ್ಕಳು

ಯಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾದ ಗ್ರಾಮದ ಯುವಕರು, ಹಿರಿಯರು

ಧಾರವಾಡದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ, ಗೌರವ ನಮನ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಜನಜಾಗೃತಿ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಕ್ಷೇತ್ರ ಶಿಕ್ಷಣಾಲಯ ಹಾಗೂ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ೧೬೦ನೇ ಜಯಂತ್ಯೋತ್ಸವ ಆಚರಣೆ ಅಂಗವಾಗಿ ವಿವೇಕ ಜ್ಯೋತಿ ಯಾತ್ರೆ ನಡೆಸಲಾಯಿತು.

ಈ ವಿಭಿನ್ನ ಹಾಗೂ ಅರ್ಥಪೂರ್ಣ ಆಚರಣೆಯಲ್ಲಿ ಶಾಲೆಯ ನೂರಾರು ಮಕ್ಕಳು ಯುವಕರು, ಹಿರಿಯರು ಕೂಡ ಉತ್ಸಾಹದಿಂದ ಭಾಗಿಯಾಗಿ ಅದಕ್ಕೆ ಮೆರಗು ನೀಡಿದರು.

ಸ್ವಾಮಿ ವಿವೇಕಾನಂದರ ಭಾವಚಿತ್ರ ಹಿಡಿದು ಜಯಘೋಷಗಳನ್ನು ಹಾಕುತ್ತಾ ಮಕ್ಕಳು ಗ್ರಾಮದಲ್ಲಿ ವಿವೇಕ ಜ್ಯೋತಿ ಯಾತ್ರೆ ನಡೆಸಿ ಗ್ರಾಮಸ್ಥರ ಮನಸೊರೆಗೊಂಡರು.

ಅಲ್ಲದೆ, ಸ್ವಾಮಿ ವಿವೇಕಾನಂದರ ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ ಸೇರಿದಂತೆ ಅನೇಕ ನುಡಿ, ಸಂದೇಶಗಳನ್ನು ಜನರಿಗೆ ಸಾರಿದರು.

ಇದಕ್ಕೂ ಮುನ್ನ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಆವರಣದಲ್ಲಿ ಸ್ವಾಮಿವಿವೇಕಾನಂದರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಚಾಲನೆ ನೀಡಿದರು.

ಬಳಿಕ ವಿವೇಕ ಜ್ಯೋತಿ ಯಾತ್ರೆಗೆ ಧಾರವಾಡದ ತಾಂತ್ರಿಕ ಉಪನಿರ್ದೇಶಕರ ಕಚೇರಿಯ ತಾಂತ್ರಿಕ ನಿರ್ದೇಶಕರಾದ ಎಸ್ ಕೆ. ಮಾಕಣ್ಣವರ ಚಾಲನೆ ನೀಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಸ್ವಾಮಿ ವಿವೇಕಾನಂದರು ಇಡೀ ಜಗತ್ತಿಗೆ ಭಾರತದ ಸಂಪ್ರದಾಯ, ಆಚರಣೆ, ಹಿಂದೂ ಧರ್ಮದ ಮಹತ್ವವನ್ನು ಸಾರಿದ ಮಹಾನ್ ಸಂತ. ಅವರೊಬ್ಬ ಸಿಡಿಲ ಸಂತರಾಗಿದ್ದರು.

ಅಂದಿನ ಕಾಲದಲ್ಲಿಯೇ ಚಿಕಾಗೋದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದು ಇಂದಿಗೂ ಇತಿಹಾಸದ ಪುಟದಲ್ಲಿ ಅಚ್ಚಳಿಯದ ಹಾಗೆ ಉಳಿದಿದೆ.

ಮಕ್ಕಳು ಸ್ವಾಮಿ ವಿವೇಕಾನಂದರ ಜೀವನ ಸಾಧನೆ, ಚಿಂತನೆಗಳನ್ನು ತಿಳಿದುಕೊಂಡು ಆದರ್ಶ ಸಮಾಜ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲಾಗುತ್ತಿದೆ. ಯುವಕರು ಕೂಡ ಅವರ ಹೆಜ್ಜೆ ಗುರುತುಗಳನ್ನು ಅರಿತುಕೊಂಡು ಸದೃಢ ಸಮಾಜ ಕಟ್ಟಲು ಮುಂದಾಗಬೇಕು ಎಂದರು.

ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಜನಜಾಗೃತಿ ಸಂಘವು ಮಕ್ಕಳಿಗಾಗಿ ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆ ಹಾಗೂ ದೇಸಿ ಕ್ರೀಡಾಕೂಟ ಆಯೋಜಿಸುತ್ತಾ ಬರುತ್ತಿದೆ. ಅವರ ಉದ್ದಾತ್ತ ಚಿಂತನೆಗಳನ್ನು ಬಾಲ್ಯದಲ್ಲಿಯೇ ಬಿತ್ತುವ ಪ್ರಯತ್ನ ಮಾಡುವ ಸದುದ್ದೇಶದಿಂದ ವಿವೇಕ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ.

ಮಕ್ಕಳ, ಯುವಕರ ಉತ್ಸಾಹ ನಮಗೆ ಅದಮ್ಯ ಚೇತನ ತಂದುಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಹಿನ್ನಲೆಯಲ್ಲಿ ಬೆಳಗ್ಗೆ ಧಾರವಾಡದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ, ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾದನಭಾವಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಬಸವರಾಜ ಹೊರಕೇರಿ, ಶಿಕ್ಷಕರಾದ ಬಸವರಾಜ ದೊಡವಾಡ, ಎ.ಎಸ್. ಲಮಾಣಿ, ಸಿದ್ದಾರ್ಥ, ಎಸ್.ಜಿ. ಬೆಂತೂರು, ಎಸ್.ವಿ.ಕೆರೀಮಠ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾದ ನಾಗರತ್ನ ಚಿನಗುಡಿ, ಮಾದನಬಾವಿ ಗ್ರಾಮದ ಯುವಮಿತ್ರರಾದ ಮಹೇಶ ಹೊಳೆಹಡಗಲಿ, ಸುರೇಶ ಯಡಳ್ಳಿ, ಸಿದ್ದು ಯರಕುಂಬಿ, ಶಿವು ಪಾಟೀಲ, ಮಂಜು ಕಂಬಾರಗಣವಿ, ಧರ್ಮೇಂದ್ರ ಭಜಂತ್ರಿ, ರಾಜು ಪುಡಕಲಕಟ್ಟಿ, ರಾಘವೇಂದ್ರ ಪಟಾತ,
ಮಹೇಶ, ಜನಜಾಗೃತಿ ಸಂಘದ ಸದಸ್ಯರಾದ ಆನಂದ ಪಾಟೀಲ, ಕುಮಾರ ಅಗಸಿಮನಿ, ಮಲ್ಲೇಶ ಅಂಬಿಗೇರ, ನವೀನ ಪ್ಯಾಟಿ, ಪಿ ಎಸ್ ಐ ಮರುಪರೀಕ್ಷೆ ಹೋರಾಟಗಾರರಾದ ರವಿಶಂಕರ ಮಾಲಿಪಾಟೀಲ, ವಿನೋದ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *