ಅಂತಾರಾಷ್ಟ್ರೀಯ

ವಿಶ್ವ ಕಂಡ ಮಹಾ ಸಂತ ವಿನೋಬಾ ಭಾವೆ ೧೧೬ನೇ ಜನುಮ ದಿನ

prajakiran.com : ಇಂದು ವಿಶ್ವ ಕಂಡ ಮಹಾ ಸಂತ, ಭಾರತ ರತ್ನ ಆಚಾರ್ಯ ವಿನೋಬಾ ಭಾವೆ ಅವರ ೧೧೬ನೇ ಜನುಮ ದಿನ. ಭೂ ದಾನ ಚಳುವಳಿಯ ಹರಿಕಾರ, ಆದರ್ಶ ಸಮಾಜದ ಕನಸು ಕಂಡು ಅದನ್ನು ಸಾಕಾರಗೊಳಿಸಲು ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ ವಿನೋಬಾ ಅವರಿಗೆ ಅನಂತ ಕೋಟಿ ಕೋಟಿ ಪ್ರಣಾಮಗಳು.

ಭೂ ರಹಿತ ಕೃಷಿ ಕಾರ್ಮಿಕರು ಹಾಗೂ ದಲಿತರಿಗಾಗಿ ಜಮೀನುದಾರರ ಬಳಿ ಭೂ ಭಿಕ್ಷೆ ಬೇಡಿ ಅಂತಹ ಭೂಮಿಯನ್ನು ಭೂ ರಹಿತರಿಗೆ ಹಂಚಿದ ಮಹಾನುಭಾವ ಆಚಾರ್ಯ ವಿನೋಭಾ.

೧೯೫೧ ರಲ್ಲಿ ತೆಲಂಗಾಣದ ಪೋಚಂಪಳ್ಳಿಯಿಂದ ಭೂದಾನ ಚಳುವಳಿ ಆರಂಭಿಸಿದ ವಿನೋಬಾ ಅವರು, ಸತತ ಹತ್ತು ವರ್ಷಗಳ ಕಾಲ ೫೮ ಸಾವಿರ ಕಿ.ಮೀ.ಗೂ ಹೆಚ್ಚು ಪಾದಯಾತ್ರೆ ನಡೆಸಿ, ದೇಶವನ್ನೇ ಸುತ್ತಿ ಭೂ ಭಿಕ್ಷೆಯಿಂದ ೫೦ ಲಕ್ಷ ಎಕರೆಗೂ ಹೆಚ್ಚು ಜಮೀನನ್ನು ಸಂಗ್ರಹಿಸಿದರು. 

ಅದನ್ನು ಭೂಮಿ ಇಲ್ಲದ ಬಡವರು, ದಲಿತರಿಗೆ ಹಂಚಿಸಿದರು. ಆಚಾರ್ಯ ವಿನೋಬಾ ಅವರ ಭೂ ದಾನ ಚಳುವಳಿ ದೇಶದಲ್ಲಿನ ಭೂ ಸುಧಾರಣೆ ಶಾಸನಗಳಿಗೆ ಮೂಲ ಪ್ರೇರಣೆಯಾಯಿತು.

ಭೂ ದಾನ ಶ್ರಮದಾನದ ಮೂಲಕ ಕೋಟಿ ಕೋಟಿ ಜನರ ಸುಖಿಸಿದ ಮಹಾನ್ ಮಾನವತಾವಾದಿ ವಿನೋಬಾ ಅವರನ್ನು  ಸ್ಮರಿಸುತ್ತಾ ಅವರಿಗೆ ಅನಂತ ಅನಂತ ನಮನಗಳನು ಸಲ್ಲಿಸೋಣ

-ನಾಗರಾಜ ಹೊಂಗಲ್, ಹಿರಿಯ ಪತ್ರಕರ್ತರು, ಇಳಕಲ್

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *