ನವದೆಹೆಲಿ prajakiran.com : ದೇಶದಲ್ಲಿ ಕೊರೋನಾ ಲಸಿಕೆ ನೀಡುವುದು ಹೆಚ್ಚಾಗಿದೆ. ವರ್ಷಾಂತ್ಯದ ವೇಳೆಗೆ ಹೆಚ್ಚಿನ ವಯಸ್ಕರಿಗೆ ಕೊರೋನಾ ವ್ಯಾಕ್ಸಿನೇಷನ್ ಮಾಡಿರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಆಗಸ್ಟ್ ನಿಂದ ಡಿಸೆಂಬರ್ ನಡುವೆ ಭಾರತ 216 ಡೋಸ್ ಕೊರೋನಾ ಲಸಿಕೆಯನ್ನು ಸಂಗ್ರಹಿಸಲಿದೆ. ಜುಲೈ ವೇಳೆಗೆ 51 ಕೋಟಿ ಡೋಸ್ ಲಸಿಕೆ ಸಂಗ್ರಹವಾಗಲಿದೆ ಎಂದು ತಿಳಿಸಿದ್ದಾರೆ.
ಕೊರೋನಾ ನಿರ್ಣಾಮ ಮಾಡಲು ಲಸಿಕೆ, ಚಿಕಿತ್ಸೆ, ಪರೀಕ್ಷೆ ಮಾಡುವುದರಿಂದ ಮಾತ್ರ ಸಾಧ್ಯವಿಲ್ಲ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯ ಎಂದಿದ್ದಾರೆ.